ಆಹಾ.!! ಬಾಯಲ್ಲಿ ನೀರೂರಿಸುತ್ತೆ ಮಾವಿನಮಿಡಿ ಮಸಾಲೆ ಉಪ್ಪಿನಕಾಯಿ


ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: 2 ಕೆಜಿ ಮಾವಿನಕಾಯಿ, ಸಾಸಿವೆ ಪುಡಿ 8 ಚಮಚ, ಹುರಿದು ಪುಡಿ ಮಾಡಿದ ಮೆಂತೆ 3 ಚಮಚ, ಕೆಂಪು ಮೆಣಸಿನ ಪುಡಿ 4 ಚಮಚ, ಚಕ್ಕೆ ಪುಡಿ 8 ಚಮಚ, ಚಿಟಿಕೆಯಷ್ಟು ಇಂಗು, ಅರಿಶಿಣ 2 ಚಮಚ, ಅರ್ಧ ಚಮಚ ಅಜಮೋದ, ಅರ್ಧ ಲೀಟರ್ ಎಣ್ಣೆ, 12 ಚಮಚ ಉಪ್ಪು.

ತಯಾರಿಸುವ ವಿಧಾನ: ಮಾವಿನ ಕಾಯಿಗಳನ್ನು ತೊಳೆದು ಒಣಗಿಸಬೇಕು. ನಂತರ ಪ್ರತಿಯೊಂದು ಮಾವಿನ ಕಾಯಿಯನ್ನು 4 ಭಾಗಗಳಾಗಿ ಅದರ ಅರ್ಧದಷ್ಟು ಕತ್ತರಿಸಿ ಒಳಗಿನ ಬೀಜ ತೆಗೆಯಬೇಕು (ಪೂರ್ಣ ಕತ್ತರಿಸಬೇಡಿ). ಈ ಮಾವಿನ ಕಾಯಿಗಳ ಒಳಗೆ ಮತ್ತು ಹೊರಗೆ ಉಪ್ಪು ಸವರಿ 8 ಗಂಟೆ ಕಾಲ ಇಡಬೇಕು. ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಇಂಗು ಹಾಕಿ, ಇಂಗು ಕಂದು ಬಣ್ಣ ಬರುವವರಗೆ ಬಿಸಿ ಮಾಡಬೇಕು. ಈ ಎಣ್ಣೆಯಲ್ಲಿ ಉಳಿದೆಲ್ಲಾ ಮಸಾಲ ಸಾಮಾಗ್ರಿಗಳನ್ನು ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಬೇಕು. ಈಗ ಸ್ವಲ್ಪ ಗಟ್ಟಿಯಾಗಿರುವ ಈ ಮಸಾಲೆಯನ್ನು ಮಾವಿನ ಕಾಯಿಯೊಳಗೆ ತುಂಬ ಬೇಕು. ಈ ಮಸಾಲೆ ತುಂಬಿದ ಮಾವಿನ ಕಾಯಿಗಳನ್ನು ಮಸಾಲೆ ಗಾಜಿನ ಡಬ್ಬದಲ್ಲಿ ಹಾಕಿ ಉಳಿದ ಎಣ್ಣೆಯನ್ನು ಅದೇ ಡಬ್ಬಕ್ಕೆ ಸುರಿದು ಮುಚ್ಚಳವನ್ನು ಗಟ್ಟಿಯಾಗಿ ಹಾಕಿ 2-3 ದಿನ ಬಿಸಿಲಿನಲ್ಲಿಟ್ಟು ನಂತರ ಒಳಗಡೆ ಇಡಬೇಕು. ಈ ಉಪ್ಪಿನಕಾಯಿ ಡಬ್ಬವನ್ನು 15 ದಿನಗಳವರಿಗೆ ದಿನಕ್ಕೊಮ್ಮೆ ಅಲುಗಾಡಿಸಿ ಇಡಬೇಕು. 15 ದಿನದ ಬಳಿಕ ತಿನ್ನಲು ರುಚಿಕರವಾದ ಮಸಾಲೆ ತುಂಬಿದ ಮಾವಿಕಾಯಿ ಉಪ್ಪಿನಕಾಯಿ ರೆಡಿಯಾಗಿರುತ್ತದೆ.

Categories: ಅಡುಗೆ ಮನೆ

Leave A Reply

Your email address will not be published.