ಸ್ವಾದಿಷ್ಟವಾದ ಡ್ರೈ ಫ್ರೂಟ್ಸ್ ಪಲಾವ್ ಒಮ್ಮೆ ಸವಿದು ನೋಡಿ


ಅಡುಗೆ ಮನೆ: ಡ್ರೈ ಫ್ರೂಟ್ಸ್ ಪಲಾವ್ ತಿನ್ನಲು ರುಚಿಕರವಾಗಿದ್ದು,ಇದರಲ್ಲಿ ಉಪಯೋಗಿಸುವ ಅನ್ನ, ಸುಲಭವಾಗಿ ಮನೆಯಲ್ಲಿಯೇ ಲಭ್ಯವಿರುವ ಸಾಂಬಾರ ಪದಾರ್ಥಗಳು ಹಾಗೂ ಒಂದು ಹಿಡಿಯಷ್ಟು ನಿಮ್ಮಿಷ್ಟದ ಒಣಫಲಗಳು. ಒಣಫಲಗಳ ಸ್ವಾದ ಹೆಚ್ಚಿಸಲು ಸಾಂಬಾರ ಪದಾರ್ಥಗಳ ಪ್ರಮಾಣವನ್ನು ಕೊಂಚ ಕಡಿಮೆ ಮಾಡಲಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು: ಬಿರಿಯಾನಿಗೆ ಸೂಕ್ತವಾದ ಯಾವುದೇ ಅಕ್ಕಿ- ಎರಡು ಕಪ್, ಚೆನ್ನಾಗಿ ತೊಳೆದು ನೀರು ಬಸಿದು ಒಣಗಿಸಿದ್ದು. ಬಾದಾಮಿ – ಹತ್ತು, ಒಣದ್ರಾಕ್ಷಿ – ಹತ್ತು, ಗೋಡಂಬಿ – ಹತ್ತು, ತುಪ್ಪ – ಎರಡು ದೊಡ್ಡಚಮಚ, ಕಾಳುಮೆಣಸು – ಒಂದು ಚಿಕ್ಕ ಚಮಚ, ಉಪ್ಪು- ರುಚಿಗನುಸಾರ, ದಾಲ್ಚಿನ್ನಿ ಎಲೆ – ಎರಡು, ಕೇಸರಿ-ಒಂದು ಚಿಟಿಕೆ

ವಿಧಾನ: ನಾನ್ ಸ್ಟಿಕ್ ಪಾತ್ರೆಯೊಂದರಲ್ಲಿ ಕೊಂಚ ನೀರು ತುಂಬಿಸಿ ಕುದಿಸಿ ಬದಿಗಿಡಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ತುಪ್ಪ ಕರಗುತ್ತಿದ್ದಂತೆಯೇ ದಾಲ್ಚಿನ್ನಿ ಎಲೆ, ಕಾಳುಮೆಣಸು, ಬಾದಾಮಿ, ಗೋಡಂಬಿ, ದ್ರಾಕ್ಷಿ ಹಾಕಿ ಹುರಿಯಿರಿ. ಕೊಂಚ ಕೆಂಪು ಬಣ್ಣ ಬರುತ್ತಿದ್ದಂತೆಯೇ ಇದಕ್ಕೆ ಅಕ್ಕಿ ಹಾಕಿ ಸುಮಾರು ಎರಡು ನಿಮಿಷಗಳ ವರೆಗೆ ಹುರಿಯಿರಿ. ಈಗ ಉಪ್ಪು ಮತ್ತು ಕೇಸರಿ ಹಾಕಿ ಅರ್ಧ ನಿಮಿಷ ಹುರಿಯಿರಿ. ಇದಕ್ಕೆ ಕುದಿಸಿಟ್ಟ ನೀರಿನಿಂದ ಮೂರು ಕಪ್ ನೀರು ಹಾಕಿ ಸ್ವಲ್ಪ ತಿರುವಿ ಕುದಿಯಲು ಬಿಡಿ. ಕುದಿ ಬಂದ ಬಳಿಕ ಉರಿಯನ್ನು ಚಿಕ್ಕದಾಗಿಸಿ ಪಾತ್ರೆಯ ಮುಚ್ಚಳ ಮುಚ್ಚಿ ಹಬೆಯಲ್ಲಿ ಅಕ್ಕಿ ಬೇಯುವಂತೆ ಮಾಡಿ. ಸುಮಾರು ನಾಲ್ಕು ಅಥವಾ ಐದು ನಿಮಿಷದ ಬಳಿಕ ಅಕ್ಕಿ ಬೆಂದಿದೆಯೇ ಪರೀಕ್ಷಿಸಿ ಬೆಂದಿದ್ದರೆ ಉರಿಯನ್ನು ನಂದಿಸಿ ಮುಚ್ಚಳವನ್ನು ಇನ್ನೂ ಕೊಂಚ ಹೊತ್ತು ಮುಚ್ಚಿಯೇ ಇರಿಸಿ. ಮಕ್ಕಳು ಒಳಬಂದ ಬಳಿಕ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಹೇಳಿ ಆ ವೇಳೆಯಲ್ಲಿ ಕೆಲವು ತರಕಾರಿಗಳನ್ನು ಚಿಕ್ಕದಾಗಿ ಹೆಚ್ಚಿ ಕೊತ್ತಂಬರಿ, ಮೊಸರು ಹಸಿಮೆಣಸು ಹಾಕಿ ಕೋಸಂಬರಿ ಮಾಡಿ. ಎಲ್ಲರೂ ಇಷ್ಟಡುವ ಪಲಾವನ್ನು ಸಿಹಿ ರಾಯತಾ ಜೊತೆಗೂ ಬಡಿಸಬಹುದು.

Categories: ಅಡುಗೆ ಮನೆ

Leave A Reply

Your email address will not be published.