ಸುವಿಚಾರ

ಮುಕ್ತಾಫಲೈಃ ಕಿಂ ಮೃಗಪಕ್ಷಿಣಾಂ ಚ ಮೃಷ್ಟಾನ್ನಪಾನಂ ಕಿಮು ಗರ್ದಭಾನಾಮ್
ಅಂಧಸ್ಯ ದೀಪೋ ಬಧಿರಸ್ಯ ಗೀತಂ ಮೂರ್ಖಸ್ಯ ಕಿಂ ಧರ್ಮಕಥಾಪ್ರಸಂಗಃ ||

ಹಕ್ಕಿಗಳು ಮತ್ತು ಕೆಲವು ಪ್ರಾಣಿಗಳು ಫಲಗಳನ್ನು ತಿನ್ನುತ್ತವೆ, ಆದರೆ ಫಲ ಅಂದ ಮಾತ್ರಕ್ಕೆ ಮುಕ್ತಾಫಲವನ್ನೇನೂ ಅವು ತಿನ್ನಲಾರವು. ಮುಕ್ತಾಫಲವೆಂದರೆ ಮುತ್ತು ಎಂದರ್ಥ. ಮುತ್ತುಗಳು ಮನುಷ್ಯನಿಗೆ ಬಹು ಅಮೂಲ್ಯವಾದವುಗಳು. ಆದರೆ ಪ್ರಾಣಿ-ಪಕ್ಷಿಗಳಿಗಲ್ಲ. ಹಾಗೇ, ಕತ್ತೆಗಳಿಗೆ ಸುಗ್ರಾಸ ಭೋಜನವನ್ನಿತ್ತೂ ಅದರಿಂದ ಪ್ರಯೋಜನವಿಲ್ಲ. ಅವಕ್ಕೆ ವ್ಯತ್ಯಾಸ ತಿಳಿಯುವುದಿಲ್ಲ. ಕರುಡನಿಗೆ ದೀಪದಿಂದಲೂ, ಕಿವುಡನಿಗೆ ಸುಶ್ರಾವ್ಯವಾದ ಹಾಡಿನಿಂದಲೂ ಪ್ರಯೋಜನವಿಲ್ಲ. ಹಾಗೆಯೇ ಧರ್ಮಬೋಧೆಯೆನ್ನುವ ಸಂಗತಿಯು ಮೂರ್ಖನಿಗೆ ನಿಷ್ಪ್ರಯೋಜಕವಾದ್ದು. ಅದರಿಂದ ಆತ ಬದಲಾಗುವುದಿಲ್ಲ, ಅದವನಿಗೆ ಅರ್ಥವೂ ಆಗುವುದಿಲ್ಲ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.