ಮಾಡಿ ನೋಡಿ ಬಾಳೆಹಣ್ಣಿನ ಬನ್ಸ್


ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಬಾಳೆಹಣ್ಣು -2, ಮೈದಾ- 1 ಕಪ್, ಸಕ್ಕರೆ – 3 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಳ್ಳು- 1 ಚಮಚ, ಓಮ- 1 ಚಮಚ, ಜೀರಿಗೆ – 1 ಚಮಚ, ಮೊಸರು – 1 ಕಪ್, ಕರಿಯಲು ಎಣ್ಣೆ,

ಮಾಡುವ ವಿಧಾನ: ಬಾಳೆಹಣ್ಣಿನ ಸಿಪ್ಪೆ ತೆಗೆದು, ಅದನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 5-6 ಗಂಟೆ ಮುಚ್ಚಿ ಇಡಬೇಕು. ಮಾಡಬೇಕಾದಲ್ಲಿ ಎಂಟು ಗಂಟೆ ಮೊದಲು ಹಿಟ್ಟು ತಯಾರಿಸಿ ಇಡಬೇಕು. ಹಿಟ್ಟನ್ನು ಸಣ್ಣ ಗಾತ್ರದ ಉಂಡೆಗಳನ್ನಾಗಿ ಮಾಡಿ ಹಾಗೂ ಮೈದಾಹಿಟ್ಟಿನಲ್ಲಿ ಹೊರಳಿಸಿ ಪೂರಿ ಆಕಾರಕ್ಕೆ ತನ್ನಿ. ಲಟ್ಟಣಿಗೆ ಏನೂ ಬೇಕಾಗಿಲ್ಲ, ಕೈಯಲ್ಲೇ ತಟ್ಟಿಕೊಳ್ಳಬಹುದು. ಹೆಚ್ಚು ತೆಳ್ಳಗಾಗುವ ಅಗತ್ಯವೂ ಇಲ್ಲ. ಬಾಣಲೆಗೆ ಎಣ್ಣೆ ಎರೆದು ಒಲೆಯ ಮೇಲೆ ಇಡಿ. ಬಿಸಿ ಎಣ್ಣೆಗೆ ಒಂದೊಂದೇ ಹಾಕಿ. ಉಬ್ಬಿ ಬರುತ್ತಿದ್ದ ಹಾಗೇ ಸೌಟಿನಿಂದ ಬಿಸಿ ಎಣ್ಣೆ ಚಿಮುಕಿಸುತ್ತಿರಿ. ಕೆಂಪಗಾಗಿ ಉಬ್ಬಿ ಬಂದ ಮೇಲೆ ಕವುಚಿ ಹಾಕಿ ಕೂಡಲೇ ತೆಗೆಯಿರಿ. ಎಲ್ಲವನ್ನೂ ಹೀಗೆ ಒಂದೊಂದೇ ಬೇಯಿಸಿ. ಬಿಸಿ ಬಿಸಿಯಾಗಿರುಬ ಬನ್ಸ್ ಅನ್ನು ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬರ್ ಜೊತೆ ಸವಿಯಿರಿ.

 

Categories: ಅಡುಗೆ ಮನೆ

Leave A Reply

Your email address will not be published.