ಬಾಯಲ್ಲಿ ನೀರೂರಿಸುವ ಸಿಹಿ ಮಾವಿನ ಕಾಯಿ ಚಟ್ನಿ


ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: 2 ಮಾವಿನಕಾಯಿ, ಬೆಲ್ಲದ ಪುಡಿ ಅರ್ಧ ಕಪ್,1 ಚಮಚ ಶುಂಠಿ ಪೇಸ್ಟ್, 1 ಚಮಚ ಖಾರದ ಪುಡಿ, ಅರ್ಧ ಚಮಚ ಅರಿಶಿಣ, ಸ್ವಲ್ಪ ಕರಿಬೇವಿನ ಎಲೆ, ಚಿಟಿಕೆಯಷ್ಟು ಇಂಗು 2, ಒಣ ಮೆಣಸು, 1 ಚಮಚ ರೋಸ್ಟ್ ಮಾಡಿದ ಸೋಂಪು ಮತ್ತು ಮೆಂತೆ 4 ಚಮಚ ತುಪ್ಪ, ರುಚಿಗೆ ತಕ್ಕ ಉಪ್ಪು, 1 ಚಮಚ ಪಂಚ ಸಂಬಾರ ಅಂದರೆ ಮೆಂತೆ ಬೀಜ, ಕರಿ ಜೀರಿಗೆ, ಜೀರಿಗೆ, ಸಾಸಿವೆ ಮತ್ತು ಸೋಂಪು ಇವುಗಳನ್ನು ಸಮಪ್ರಮಾಣದಲ್ಲಿ ಹಾಕಿ ಪುಡಿ ಮಾಡಿದ್ದು (ಕರಿ ಜೀರಿಗೆ ಇಲ್ಲದಿದ್ದರೆ ಉಳಿದ ಪದಾರ್ಥಗಳನ್ನು ಮಾತ್ರ ಬಳಸಿ)

ತಯಾರಿಸುವ ವಿಧಾನ: ಮಾವಿನಕಾಯಿಯ ಸಿಪ್ಪೆ ಸುಲಿದು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ. 2 ಚಮಚ ತುಪ್ಪವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ. ಮಾವಿನ ಕಾಯಿ ತುಂಡುಗಳನ್ನು ಹಾಕಿ ಅವುಗಳು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದು ನಂತರ ಅವುಗಳನ್ನು ಮ್ಯಾಶ್ ಮಾಡಿ ಉರಿಯಿಂದ ಇಳಿಸಿ ಬದಿಯಲ್ಲಿಡಿ. ಈಗ 2 ಚಮಚ ತುಪ್ಪ ಬಿಸಿ ಮಾಡಿ ಅದರಲ್ಲಿ ಒಣ ಮೆಣಸನ್ನು ಹಾಕಿ, ಕರಿಬೇವಿನ ಎಲೆ ಹಾಕಿ, ನಂತರ ಶುಂಠಿ ಪೇಸ್ಟ್ ಸೇರಿಸಿ, ಇಂಗು ಹಾಕಿ ಒಂದು ನಿಮಿಷ ಪಂಚ ಸಂಬಾರ ಸೇರಿಸಿ 2 ನಿಮಿಷ ಸೌಟ್ ನಿಂದ ಆಡಿಸಿ, ಈಗ ಮ್ಯಾಶ್ ಮಾಡಿದ ಮಾವಿನಕಾಯಿ ಹಾಕಿ. ನಂತರ ಹಳದಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಬೆಲ್ಲದ ಪುಡಿ ಸೇರಿಸಿ 5 ನಿಮಿಷ ಫ್ರೈ ಮಾಡಿ. ಈಗ 1/2 ಕಪ್ ನೀರು ಸೇರಿಸಿ, ಪಾತ್ರೆಯ ಬಾಯಿ ಮುಚ್ಚಿ 8-10 ನಿಮಿಷ ಬೇಯಿಸಿ, ನಂತರ ರೋಸ್ಟ್ ಮಾಡಿದ ಮೆಂತೆ ಮತ್ತು ಸೋಂಪನ್ನು ಸೇರಿಸಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ. ಇಷ್ಟು ಮಾಡಿದರೆ ಸರ್ವ್ ಮಾಡಲು ಸಿಹಿ ಮಾವಿನಕಾಯಿ ಚಟ್ನಿ ರೆಡಿ.

Categories: ಅಡುಗೆ ಮನೆ

Leave A Reply

Your email address will not be published.