ಸುವಿಚಾರ

ಪಾತಿತೇಪಿ ಕರಾಘಾತೈರುತ್ಪತತ್ಯೇವ ಕಂದುಕಃ 

ಪ್ರಾಯೇಣ ಹಿ ಸುವೃತ್ತಾನಾಮಸ್ಥಾಯಿನ್ಯೋ ವಿಪತ್ತಯಃ ||

ಚೆಂಡನ್ನು ಕೈಗಳಿಂದ ಬಲವಾಗಿ ನೆಲಕ್ಕೆ ಕುಕ್ಕಿದಷ್ಟೂ ಅದು ಮತ್ತೆ ಮತ್ತೆ ತಾನೇ ಪುಟಿದೆದ್ದು ಮೇಲಕ್ಕೆ ಬರುತ್ತದೆ. ತಮ್ಮ ಜೀವನದಲ್ಲಿ ಒಳ್ಳೆಯ ಚರಿತೆಯನ್ನು ಕಟ್ಟಿಕೊಂಡವರು, ಸನ್ನಡತೆಯನ್ನು ಇಟ್ಟುಕೊಂಡವರು, ಸಜ್ಜನರಾದವರು ಸಹ ಕಷ್ಟಗಳಿಂದ ಪದೇ ಪದೇ ಅಭಿಹತರಾದರೂ ಮತ್ತೆ ತಾವೇ ಪುಟಿದೆದ್ದು ನಿಲ್ಲುತ್ತಾರೆ. ಅವರಿಗೆ ಬರುವ ಕಷ್ಟಗಳು ಅಸ್ಥಾಯಿ ರೂಪದವು, ಬೇಗ ಮುಗಿದುಹೋಗುವಂಥವು. ತಮ್ಮ ಆತ್ಮಬಲದಿಂದಲೇ ಅವರು ಮತ್ತೆ ಪುಟಿದೆದ್ದು ನಿಲ್ಲುತ್ತಾರಷ್ಟೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.