ಅನಧಿಕೃತವಾಗಿ ಚರ್ಚ್ ನಿರ್ಮಾಣ: ಕ್ರಮಕ್ಕೆ ಆಗ್ರಹ


ಕಾರವಾರ: ಇಲ್ಲಿನ ಪೊಲೀಸ್  ಹೆಡ್ ಕ್ವಾರ್ಟರ್ಸ್ ಬಳಿ ಸರಕಾರಿ ಜಮೀನಿನಲ್ಲಿ ಹೆದ್ದಾರಿಗೆ ಹೊಂದಿಕೊಂಡು ಅನಧಿಕೃತವಾಗಿ ಚರ್ಚ್ ನಿರ್ಮಿಸಲಾಗುತ್ತಿದ್ದು ಕಟ್ಟಡವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯಕ ಗೃಹಕಾರ್ಯದರ್ಶಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಕಾಜುಬಾಗದಲ್ಲಿರುವ ಪೊಲೀಸ್ ಹೆಡ್ ಕ್ವಾರ್ಟರ್ಸ್ ಸುಮಾರು 150 ವರ್ಷ ಹಳೆಯದಾಗಿದ್ದು ಬ್ರಿಟಿಷರ ಕಾಲದಿಂದಲೂ ಇದೆ. ಈ ಜಾಗ ಈಗ ನಗರದ ಮಧ್ಯ ಭಾಗದಲ್ಲಿದ್ದು ನೂರಾರು ಕೋಟಿ ಬೆಲೆ ಬಾಳುತ್ತದೆ. ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಸರಕಾರಿ ಜಮೀನಿನಲ್ಲಿ 1999 ರ ನಂತರ ನಿರ್ಮಿಸಿದ ಎಲ್ಲ ಅನಧಿಕೃತ ಪ್ರಾರ್ಥನಾ ಸ್ಥಳಗಳು, ಮೂರ್ತಿ ಅಥವಾ ಸ್ಮಾರಕಗಳನ್ನು ತೆರವು ಗೊಳಿಸುವಂತೆ ಎಲ್ಲ ರಾಜ್ಯ ಸರಕಾರಗಳಿಗೂ ಆದೇಶ ನೀಡಿತ್ತು. ಸರಕಾರಿ ಜಮೀನು, ಪಾರ್ಕ್ ಹಾಗೂ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಅನುಮತಿ ಇಲ್ಲದೇ ಯಾವುದೇ ಪ್ರಾರ್ಥನಾ ಸ್ಥಳ, ಮೂರ್ತಿಗಳ ಸ್ಥಾಪನೆ ಮಾಡಬಾರದು ಎಂದು ಸ್ಪಷ್ಟವಾಗಿ ಆದೇಶಿಸಿರುವಾಗಲೇ ಕಾರವಾರದ ಡಿ.ಎ.ಆರ್. ಸಿಪಿಐ ಆಗಿರುವ ಸಚಿನ್ ಲಾರೆನ್ಸ್ ಎಂಬ ಪೊಲೀಸ್ ಅಧಿಕಾರಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ಚರ್ಚನ್ನು ನಿರ್ಮಿಸುತ್ತಿದ್ದಾರೆ. ಇದು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿದಿದ್ದರೂ ಕಂಡು ಕಾಣದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕುಳಿತಿದ್ದಾರೆ ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ನಗರಸಭೆ ಅಥವಾ ಲೋಕೋಪಯೋಗಿ ಇಲಾಖೆಯ ಅಥವಾ ಪೊಲೀಸ್ ಇಲಾಖೆಯ ಯಾವುದೇ ದಾಖಲೆಗಳಲ್ಲಿ ಚರ್ಚ್ ಅಥವಾ ಪ್ರಾರ್ಥನಾ ಗೃಹ ಈ ಹಿಂದೆ ಇತ್ತು ಎನ್ನುವ ದಾಖಲೆಗಳು ಇರುವುದಿಲ್ಲ. ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ನಗರಸಭೆಯಿಂದಲೂ ಪರವಾನಿಗೆ ಪಡೆಯಲಾಗಿಲ್ಲ. ಅಲ್ಲದೇ ಪ್ರಾರ್ಥನಾ ಗೃಹವನ್ನು ಹೆದ್ದಾರಿಗೆ ಹೊಂದಿಕೊಂಡಂತೆ ನಿರ್ಮಿಸುತ್ತಿರುವುದು ಖಂಡನೀಯವಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅನುಮತಿಯನ್ನೂ ಈ ಕಟ್ಟಡಕ್ಕೆ ಪಡೆದಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇಲ್ಲಿನ ಡಿಎಆರ‍್ನಲ್ಲಿ ಸದ್ಯ ಸಚಿನ ಅವರ ಕುಟುಂಬವನ್ನು ಹೊರತುಪಡಿಸಿ ಇನ್ಯಾವುದೇ ಕ್ರಿಶ್ಚಿಯನ್ ಕುಟುಂಬವೂ ಇರುವುದಿಲ್ಲ. ಹೀಗಿರುವಾಗ ಪೊಲೀಸ್  ಟ್ರೇನಿಗಳನ್ನು ಬಳಸಿ ಈ ಚರ್ಚನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಸರಕಾರಿ ಜಮೀನನ್ನು ಅತಿಕೃಮಿಸಿ ಸಚಿನ ಅವರ ಕುಟುಂಬಕ್ಕೋಸ್ಕರವೇ ನಿರ್ಮಾಣವಾಗುತ್ತಿದೆಯೇ? ಎಂಬುದರ ಬಗ್ಗೆ ತನಿಖೆಯಾಗಬೇಕು. ಅಲ್ಲದೇ ಈ ಚರ್ಚಿನ ನಿರ್ಮಾಣಕ್ಕೆ ಪಕ್ಕದಲ್ಲಿಯೇ ಪೊಲೀಸ್  ಸಿಬ್ಬಂದಿಗಳಿಗಾಗಿ ನಿರ್ಮಾಣವಾಗುತ್ತಿರುವ ನೂತನ ವಸತಿಗೃಹಗಳಿಗಾಗಿ ತಂದ ಕಲ್ಲು, ಸಿಮೆಂಟ್, ಜಲ್ಲಿ, ಮರಳು ಅಕೃಮ ಚರ್ಚ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆಯೇ ಎಂಬ ಅನುಮಾನವಿದೆ. ಲೆಕ್ಕದಲ್ಲಿ ಪೊಲೀಸ್ ಸಿಬ್ಬಂದಿಯ ಮನೆಗಳ ನಿಮ್ರಾಣಕ್ಕೆ ಈ ಸಾಮಗ್ರಿಗಳನ್ನು ತೋರಿಸಿ ಅವನ್ನು ಚರ್ಚ ನಿರ್ಮಾಣಕ್ಕೆ ಅಕೃಮವಾಗಿ ಬಳಸಿದರೆ ಸಿಬ್ಬಂದಿಯ ಮನೆ ನಿರ್ಮಾಣದ ಕಾರ್ಯ ಕಳಪೆ ಆಗುತ್ತದೆ. ಪೊಲೀಸ್ ಇಲಾಖೆಗೆ ಸೇರಿದ ಜಮೀನಿನಲ್ಲಿ ಅಕೃಮ ಪ್ರಾರ್ಥನಾಗೃಹ ನಿರ್ಮಿಸಲು ಬೇರೆಡೆಯಿಂದ ಹಣವನ್ನು ಸಚಿನ ಅವರು ತಂದಿದ್ದರೆ ಅದು ಭ್ರಷ್ಟಾಚಾರವಾಗುತ್ತದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಸಚಿನ ಲಾರೆನ್ಸ್ ಕೆಲ ಮಿಷನರಿ ಸಂಘಟನೆಗಳ ನೆರವಿನಿಂದ ಇಲ್ಲಿನ ಪೊಲೀಸ್ ಟ್ರೇನಿಗಳ ಮೇಲೆ ಕ್ರಿಶ್ಚಿಯನ್ ಧರ್ಮವನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ಅಕೃಮ ಪ್ರಾರ್ಥನಾಗೃಹ ಅಥವಾ ಚರ್ಚನ್ನು ಭವಿಷ್ಯದಲ್ಲಿ ಡಿಎಆರ್ ಸಿಬ್ಬಂದಿಗಳ ಕುಟುಂಬ ಹಾಗೂ ಅಲ್ಲಿ ತರಬೇತಿಗಾಗಿ ಬರುವ ಪೊಲೀಸ್ ಟ್ರೇನಿಗಳನ್ನು ಮತಾಂತರ ಮಾಡುವ ದುರುದ್ದೇಶದಿಂದ ನಿರ್ಮಿಸಲಾಗುತ್ತಿದೆ ಎಂಬ ಅನುಮಾನಗಳಿವೆ. ಮತಾಂತರದಂತಹ ಚಟುವಟಿಕೆಗಾಗಿ ಇಲಾಖೆಯ ಜಮೀನನ್ನು ಅತಿಕೃಮವಾಗಿ ಬಳಸಿ, ತಮ್ಮ ಅಧಿಕಾರವನ್ನು ದುರ್ಬಳಕೆ ಮಾದಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಅವರ ವಿರುದ್ಧ ತನಿಖೆಯನ್ನು ನಡೆಸಬೇಕಲ್ಲದೇ ವರನ್ನು ತಕ್ಷಣ ಅಮಾನತುಗೊಳಿಸಿ ಕಾರವಾರದಿಂದ ವರ್ಗಾಯಿಸಬೇಕು ಎಂದು ರಾಜೇಶ ನಾಯಕ ಒತ್ತಾಯಿಸಿದ್ದಾರೆ.

 

Categories: ನಮ್ಮ ಹೆಮ್ಮೆಯ ತಾಣಗಳು

Leave A Reply

Your email address will not be published.