ಸಂಕ್ರಾಂತಿ ನಂತರ ಸರ್ಕಾರ ಉರುಳುತ್ತದೆ ಎಂಬುದು ಬಿಜೆಪಿಯವರ ಭ್ರಮೆ; ಎಚ್.ಕೆ.ಪಾಟೀಲ್

ಶಿರಸಿ: ಸಂಕ್ರಾಂತಿ ನಂತರ ರಾಜ್ಯದಲ್ಲಿ ಶಾಂತಿ ಬರಲಿದ್ದು, ಸರ್ಕಾರ ಉರುಳುತ್ತದೆ ಎನ್ನುವುದು ಬಿಜೆಪಿಯವರ ಭ್ರಮೆ ಆಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಬಿಜೆಪಿಯವರ ಸಂಕ್ರಾಂತಿ ನಂತರ ‘ಕ್ರಾಂತಿ’ಯ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಇಲ್ಲಿನ ಗಾಣಿಗ ಸಮುದಾಯ ಭವನದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವನ್ನು ಉರುಳಿಸುವುದು ನೈತಿಕವಾಗಿಯೂ ಸರಿಯಲ್ಲ. ಜನರೂ ಸಹ ಒಪ್ಪುವುದಿಲ್ಲ. ಇದರಿಂದ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷದ ಚಿನ್ಹೆ ಪಡೆದು, ಪಕ್ಷದಿಂದ ಸ್ಪರ್ಧಿಸಿದವರನ್ನ ಜನರು ಶಾಸಕರನ್ನಾ ಮಾಡಿರುತ್ತಾರೆ. ಅಂತವರು ಬಿಜೆಪಿಯವರು ಕರೆದಾಗ ಸರಕುನಂತೆ ಬರಿತ್ತಾರೆ ಎನ್ನುವ ತಪ್ಪು ಕಲ್ಪನೆ ಅವರದ್ದು. ಅಲ್ಲದೇ ಆ ರೀತಿ ಆದಲ್ಲಿ ಅರಾಜಗತೆ ಸೃಷ್ಟಿಯಾಗಲಿದೆ. ಅದು ಸಾಧ್ಯವಿಲ್ಲದ ಮಾತಾಗಿದ್ದು, ಬಿಜೆಪಿಯವರಿಗೆ ನಿರಾಸೆ ಆಗಲಿದೆ ಎಂದರು.

ಸಚಿವ ಎಚ್.ಡಿ.ರೇವಣ್ಣ ಮತ್ತು ಅಧ್ಯಕ್ಷ ದಿನೇಶ ಗುಂಡೂರಾವ್ ಮಧ್ಯೆ ಸಣ್ಣ ಪುಟ್ಟ ಮಾತುಗಳಾಗಿದ್ದು, ಅದು ಪತ್ರಿಕೆಗಳಲ್ಲಿ ಮಸಾಲೆ ಹಚ್ಚಿ ಬಂದಿವೆ. ಕೆಲವೊಂದು ಕಪೋಲ ಕಲ್ಪಿತವಾಗಿಯೂ ವರದಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ರಾಹುಲ್ ಗಾಂಧಿ ಮತ್ತು ದೇವೆಗೌಡ ಅವರ ಸಮಾಲೋಚನೆಯಲ್ಲಿ ಟಿಕೇಟ್ ಹಂಚಿಕೆ ಮಾಡಿ ಸ್ಪರ್ಧೆ ಮಾಡುತ್ತೇವೆ ಎಂದರು. ರಾಜ್ಯಕ್ಕೆ ೫ ವರ್ಷಗಳ ಕಾಲ ಮೃತ್ರಿ ಸರ್ಕಾರದ ಅವಶ್ಯಕತೆಯಿದ್ದು, ಜನರೂ ಸಹ ಇದನ್ನೇ ಬಯಸುತ್ತಿದ್ದಾರೆ. ಮೃತ್ರಿ ಸರ್ಕಾರದ ಎಲ್ಲಾ ಸಮಸ್ಯೆಗಳೂ ಬಗೆಹರಿದಿದ್ದು, ಪೂರ್ಣಾವಧಿಗೆ ಆಡಳಿತ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‌

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಎಸ್.ಕೆ.ಭಾಗ್ವತ್, ರಮೇಶ ದುಭಾಶಿ , ಆರ್.ಎಮ್.ಹೆಗಡೆ ಇದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.