ಶಾಲಾ ಕಾರ್ಯಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಆಚರಿಸಬೇಕು; ಶಾಸಕ ದಿನಕರ ಶೆಟ್ಟಿ


ಕುಮಟಾ: ಶಾಲಾ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಬೇಕು. ಅದನ್ನು ಬೇರೆಯವರು ನೋಡಿ ಅನುಸರಿಸುವಂತಿರಬೇಕು. ಚಿಕ್ಕ ಶಾಲೆ ಆದರೂ ಇಷ್ಟು ಸಂಭ್ರಮದಿಂದ ಹಬ್ಬದ ವಾತಾವರಣ ಸೃಷ್ಠಿಸಿ, ಶತಮಾನೋತ್ಸವ ಆಚರಿಸುತ್ತಿದ್ದೀರಿ. ಇದು ಈ ಊರಿನವರಿಗೆ ಶಿಕ್ಷಣದ ಹಾಗೂ ಶಾಲೆಯ ಮೇಲಿರುವ ಪ್ರೀತಿ ತೋರಿಸುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಹೆಗಡೆ ಮೇಲಿನಕೇರಿಯಲ್ಲಿ ಎರಡು ದಿನಗಳ ಕಾಲ ನಡೆದ ಸರ್ಕಾರಿ ಶಾಲಾ ಶತಮಾನೋತ್ಸವದ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ವೇದಿಕೆಯಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದ್ದೀರಿ ಇದು ಬಹಳ ಪುಣ್ಯದ ಕೆಲಸ, ಅವರಿಗೂ ಜೀವಮಾನದಲ್ಲಿ ನಾನು ಸೇವೆ ಸಲ್ಲಿಸಿದ ಶಾಲೆಯಲ್ಲಿ ಗೌರವ ಸ್ವೀಕರಿಸಿದ ಸಾರ್ಥಕತೆಯ ಭಾವ ಸದಾ ಇರುತ್ತದೆ ಎಂದರಲ್ಲದೇ, ಈ ಶಾಲೆಗೆ ಈಗಾಗಲೇ ರಿಪೇರಿಗಾಗಿ ಹಣ ಮೀಸಲಿಡಲಾಗಿದೆ. ಜೊತೆಗೆ ಶಾಲೆಗೆ ಕಟಾಂಜನ ನಿರ್ಮಿಸಲು ಶಾಸಕರ ಹಣ ನೀಡುವುದಾಗಿ ತಿಳಿಸಿದರು.

ಹೆಗಡೆ ಅಭಿವೃದ್ದಿ ಬಗ್ಗೆ ನನಗೂ ತುಂಬಾ ಆಸಕ್ತಿ ಹೊಂದಿದ್ದೇನೆ. ಹಿಂದಿನ ನನ್ನ ಶಾಸಕ ಅವಧಿಯಲ್ಲಿ ವಿರೋಧ ಇದ್ದರೂ ಮುರಾರ್ಜಿ ಶಾಲೆಗೆ ಜಾಗ ಮಂಜೂರಿ ಮಾಡಿಸಿದ್ದೆ. ಈಗಲೂ ಅನೇಕ ಅಭಿವೃದ್ದಿ ಬಗ್ಗೆ ಚಿಂತನೆ ನಡೆಸಲಾಗಿದೆ ಮುಖ್ಯವಾಗಿ ಹೆಗಡೆಗೆ ನೀರಿನ ವ್ಯವಸ್ಥೆ ಮಾಡಲು ಶ್ರಮಿಸುತ್ತೇನೆ. ಕುಮಟಾ ಪುರಸಭೆಯಿಂದ ಸರಬರಾಜು ಮಾಡಲು ಪ್ರಸ್ಥಾಪ ಇದೆ. ಯಾರಿಗೆ ಏನೇ ಸಮಸ್ಯೆ ಇದ್ದರೂ ನೇರವಾಗಿ ನನ್ನಲ್ಲಿಗೆ ಬನ್ನಿ ನಿಮ್ಮ ಕೆಲಸ ಮಾಡಿಕೊಳ್ಳಿ ಎಂದು ಮುಕ್ತ ಮನಸ್ಸಿನಿಂದ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮೀತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ಸರ್ಕಾರಿ ಶಾಲೆಯನ್ನು ನಾವೆಲ್ಲ ಸೇರಿ ಉಳಿಸಿ ಬೆಳೆಸಬೇಕಾಗಿದೆ. ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಿದ್ದು, ಅದರ ಪ್ರಯೋಜನ ನಾವೆಲ್ಲ ಪಾಲಕರು ಪಡೆಯಬೇಕು ಖಾಸಗಿ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸುವುದಕ್ಕಿಂತ ನಮ್ಮ ನಮ್ಮ ಊರಿನ ಸರ್ಕಾರಿ ಶಾಲೆಗೆ ಸೇರಿಸುವ ಮನಸ್ಸು ಮಾಡಬೇಕು. ನಮ್ಮ ಶಿಕ್ಷಕರು ಸಾಕಷ್ಟು ಸಮರ್ಥರಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಕುಮಟಾ ಸರ್ಕಾರಿ ಆಸ್ಪತ್ರೆಯನ್ನು ನಮ್ಮ ಜಿಲ್ಲಾ ಪಂಚಾಯತಿ ಹಣದಲ್ಲಿ ಅತಿ ಉತ್ತಮವಾದ ಬದಲಾವಣೆ ಮಾಡಲಾಗಿದೆ. ಜನರಿಗೆ ಕಡಿಮೆ ವೆಚ್ಚದಲ್ಲಿ ಔಷಧ ಗುಳಿಗೆ ಸಿಗಲು ಪ್ರಧಾನಮಂತ್ರಿ ಜನೌಷದ ಕ್ರೇಂದ್ರ ತೆರೆಯಲು ಸಿದ್ದತೆ ನಡೆದಿದೆ ಎಂದರು.

ಮುಖ್ಯವಾಗಿ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಹೆಗಡೆಗೆ ಕರೆಸಿ, ಇಲ್ಲಿನ ಸಮಸ್ಯೆ ಮನವರಿಕೆ ಮಾಡಿದ್ದೇನೆ. ಕುಮಟಾ ಪುರಸಭೆಯಿಂದ ಹೆಗಡೆಗೆ ನೀರು ಸರಬರಾಜಿನ ಬಗ್ಗೆ ಪ್ರಸ್ಥಾಪ ಇಡಲಾಗಿದೆ. ನಮ್ಮ ಶಾಸಕರು ದಯವಿಟ್ಟು ಅದರ ಬಗ್ಗೆ ನಮ್ಮ ಜೊತೆ ಕೈಜೋಡಿಸಿ, ನೀರು ಪೂರೈಕೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಗ್ರಾ.ಪಂ ಅಧ್ಯಕ್ಷ ಮಂಜುನಾಥ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಹಾಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಲೆಯ ಮುಖ್ಯಾಧ್ಯಾಪಕ ಶಂಭು ಹೆಗಡೆ ಪ್ರಾಸ್ತಾವಿಕದೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕ ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ಲಕ್ಷ್ಮಣ ಪಟಗಾರ ವಂದಿಸಿದರು. ಶಿಕ್ಷಕ ಯೋಗೀಶ ಪಟಗಾರ ಹಾಗೂ ಇತರರು ಹೂಗುಚ್ಛ ನೀಡಿ ಎಲ್ಲರಿಗೂ ಗೌರವಿಸಿದರು.

ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷೆ ವಿಜಯಾ ಪಟಗಾರ, ಉಪಾಧ್ಯಕ್ಷೆ ಗೀತಾ ಮುಕ್ರಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಸಿ ಟಿ ನಾಯ್ಕ, ಡಯಟ್ ಉಪ ನಿದೇಶಕ ಈಶ್ವರ ನಾಯ್ಕ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ (ಆನಂದು) ಗಾಂವಕರ್, ಗ್ರಾ ಪಂ ಉಪಾಧ್ಯಕ್ಷೆ ನಾಗವೇಣಿ ಹೆಗಡೆ, ಸದಸ್ಯರಾದ ರಾಜು ಮುಕ್ರಿ, ಶಿವಾನಂದ ಪಟಗಾರ, ಸುಭಾಷ್ ಪಟಗಾರ, ಸುದರ್ಶನಾ ಪಂಡಿತ, ಶತಮಾನೋತದಸವ ಸಮೀತಿ ಅಧಕ್ಷ ಮಾರಪ್ಪ ಪಟಗಾರ, ಶಿಕ್ಷಕ ನರಹರಿ ಭಟ್ಟ ಹಾಗೂ ಎಸ್‍ಡಿಎಂಸಿಯವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.