ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಿ ಬದುಕನ್ನು ಹಸನಾಗಿಸಬೇಕು; ರವೀಂದ್ರ ಕಾಪ್ಸೆ

ಯಲ್ಲಾಪುರ: ಕಠಿಣಿವಾದ ಪರಿಶ್ರಮ ಹಾಗೂ ಶೃದ್ಧೆಯಿಂದ ವಿದ್ಯಾರ್ಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳು ಮಹತ್ತರವಾದ ಗುರಿ ಸಾಧಿಸಿ ಭವಿಷ್ಯದ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ಕಾಪ್ಸೆ ಹೇಳಿದರು.

ಅವರು ಪಟ್ಟಣದ ಕಾಳಮ್ಮನಗರದ ಸರಕಾರಿ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಶಿಕ್ಷಕರ ಹಾಗೂ ಪಾಲಕರ ಮಾರ್ಗದರ್ಶನದೊಂದಿಗೆ ಉನ್ನತ ವಿಧ್ಯಾಭ್ಯಾಸ ಮಾಡಿ ಒಳ್ಳೆಯ ಹೆಸರು ಗಳಿಸಿ ಸಮಾಜಕ್ಕೆ ಉಪಯೋಗವಾಗುವಂತೆ ಕಾರ್ಯವನ್ನು ನಿರ್ವಹಿಸಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ, ಮಕ್ಕಳು ಸಂಪಾದಿಸಿದ `ಚೈತನ್ಯ’ ಹಸ್ತಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸದಾ ಭ್ರಮಾಲೋಕದಲ್ಲಿ ವಿಹರಿಸದೇ ವಾಸ್ತವ ಜಗತ್ತಿನ ಕುರಿತು ತಿಳಿದುಕೊಳ್ಳಬೇಕು. ವಿಧ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ನಿಯಂತ್ರಣದಲ್ಲಿಟ್ಟು, ಮಹೋನ್ನತ ಧ್ಯೇಯೋದ್ದೇಶಗಳ ಸಾಕಾರಕ್ಕೆ ಪ್ರಯತ್ನಿಸಬೇಕು. ಸುಸಂಸ್ಕೃತ ನಾಗರಿಕರಾಗುವ ಮೂಲಕ ಎಲ್ಲರ ಶ್ರೇಯೋಭಿವೃದ್ಧಿಗೆ ಕಾರಣರಾಗಬೇಕು. ಏಕಾಗೃತೆಯಿಂದ ಅಭ್ಯಾಸ ಮಾಡಿ ನಿರ್ಧಿಷ್ಟ ಗುರಿ ಸಾಧಿಸುವ ಛಲ ಹೊಂದಿರಬೇಕು ಎಂದರು.

ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ನಾಗರತ್ನಾ ನಾಯಕ ಹಾಗೂ ಈ ವರ್ಷ ಆಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದ ವನವಾಸಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ ವಿಧ್ಯಾರ್ಥಿನಿ ಪಲ್ಲವಿ ಸಿದ್ದಿ ಇವರನ್ನು ಸನ್ಮಾನಿಸಲಾಯಿತು. ಶಾಲಾಭಿವೃದ್ಧಿ ಸಮೀತಿಯ ಅಧ್ಯಕ್ಷ ಎಸ್.ಕೆ.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾ ಯುವಜನ ಮತ್ತು ಕ್ರೀಡಾ ಇಲಾಖೆಯ ನಾರಾಯಣ ನಾಯಕ, ಶಿಕ್ಷಕರಾದ ರಫೀಕ್ ಮುಜಾವರ್, ಭಾರತಿ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು. ಮುಖ್ಯಾಧ್ಯಾಪಕ ದೇವಿದಾಸ ಪಟಗಾರ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಹೆಗಡೆ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.