ಮಾವನ ಹಣವನ್ನೆ ವಂಚಿಸಿದ ಅಳಿಯ

ಕಾರವಾರ: ವರ್ಷದ ಹಿಂದೆ ತನ್ನ ಮಾವನ ಖಾತೆಯಲ್ಲಿದ್ದ ಲಕ್ಷಾಂತರ ರೂ. ಆನ್ಲೈನ್ ಬ್ಯಾಂಕಿಗ್ ಮೂಲಕ ವಂಚಿಸಿದ ಅಳಿಯನನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಕೋಲಾದ ಅಂಬಾರಕೋಡ್ಲದ ಗಂಗಾಧರ ಬಾಬಯ್ಯ ನಾಯ್ಕ ಹಣ ಕಳೆದುಕೊಂಡವರಾಗಿದ್ದು, ಅದೇ ಊರಿನ ಅವರ ತಂಗಿಯ ಮಗ ಬಿಎಸ್ ಸಿ ಓದುತ್ತಿದ್ದ ಅಜಯ್ ನಾಯ್ಕ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ. ನಿವೃತ್ತ ನೌಕರರಾಗಿರುವ ಗಂಗಾಧರ ಅವರು ಕಳೆದ ವರ್ಷ ಮಾ. 7 ರಂದು ತಮ್ಮ ಎಸ್ ಬಿ ಐ ಖಾತೆಯಿಂದ 1,68,200 ರೂ ಹಣವನ್ನು ಆನ್ಲೈನ್ ಬ್ಯಾಂಕಿಂಗ್ ಮೂಲಕ ವಂಚಿಸಿರುವ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಠಾಣೆಯಲ್ಲಿ ಪ್ರಕರಣ ತನಿಖೆ ಪ್ರಗತಿಯಲ್ಲಿಲ್ಲದ ಕಾರಣ ಜಿಲ್ಲಾ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು. ಅದರಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

ವಂಚಿಸಿದ್ದು ಹೇಗೆ ಗೊತ್ತಾ?: ಗಂಗಾಧರ ಅವರು ಒಮ್ಮೆ ಮೊಬೈಲ್ ನ್ನು ಅಳಿಯ ಅಜಯ ಬಳಿ ನೀಡಿ ಮೊಬೈಲ್ ನಲ್ಲಿ ಏನೋ ತೊಂದರೆಯಾಗಿದೆ ಸರಿಪಡಿಸಿಕೊಡುವಂತೆ ತಿಳಿಸಿದ್ದರು. ಆದರೆ ಈ ವೇಳೆ ಅವರ ನಿವೃತ್ತಿ ಹಣ ಖಾತೆಯಲ್ಲಿರುವುದನ್ನು ತಿಳಿದ ಆತ ಅವರ ಮೊಬೈಲ್ ನಲ್ಲಿ ಪೋನ್ ಪೇ ಆಪ್ ಡೌನ್ ಲೋಡ್ ಮಾಡಿ ಅದಕ್ಕೆ 1.68.200 ರೂ ಹಣವನ್ನು ವರ್ಗಾಯಿಸಿಕೊಂಡಿದ್ದ.

ಅಲ್ಲದೆ ಪ್ಲಿಪ್ ಕಾರ್ಟ್ ಆನ್ಲೈನ್ ಶಾಪಿಂಗ್ ಕಡಿತ ಮಾಡುವ ಮೊದಲು ಬರುವ ಓಟಿಪಿಯನ್ನು ತನ್ನ ಮೊಬೈಲ್ ಗೆ ಬರುವಂತೆ ಮಾಡಿದ್ದ. ಪ್ಲಿಪ್ ಕಾರ್ಟ್ ಗೆ ಆರ್ಡರ್ ಮಾಡುವ ವಸ್ತುಗಳನ್ನು ಧಾರವಾಡದಲ್ಲಿರುವ ತನ್ನ ವಿಳಾಸಕ್ಕೆ ತರಿಸಿಕೊಳ್ಳುತ್ತಿದ್ದ. ಆದರೆ ಇದು ಗಂಗಾಧರ ಅವರ ಮಗಳಿಗೆ ಗೊತ್ತಾಗಿ ಎರಡು ಬಾರಿ ಆರ್ಡರ್ ಕ್ಯಾನ್ಸಲ್ ಮಾಡಿದ್ದರು. ಬಳಿಕ ಬ್ಯಾಂಕ್ ಖಾತೆಯನ್ನು ನೋಡಿದಾಗ ಯಾರೋ ದುಷ್ಕರ್ಮಿಗಳು ವಂಚನೆ ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಇದೀಗ ಆರೋಪಿಯನ್ನು ಪತ್ತೆಹಚ್ಚಿರುವ ಡಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡೆಸಿದ್ದಾರೆ. ಅಲ್ಲದೆ ಈತನಿಗೆ ಜ.24 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.