ಮಕ್ಕಳಲ್ಲಿ ಹಿಂದಿ ಕಲಿಕೆಗೆ ಶಿಕ್ಷಕರು ಉತ್ತೇಜನ ನೀಡಬೇಕು; ಶಿವಾ ನಾಯ್ಕ


ಕುಮಟಾ: ಹಿಂದಿ ಭಾಷೆಯ ಬೆಳವಣಿಗೆ ಹಾಗೂ ಮಕ್ಕಳಲ್ಲಿ ಹಿಂದಿ ಕಲಿಕೆಗೆ ಉತ್ತೇಜನ ನೀಡುವ ದೆಸೆಯಲ್ಲಿ ಶಿಕ್ಷಕರು ಕ್ರೀಯಾಶೀಲರಾಗಿ ಮುನ್ನಡೆಯಬೇಕು ಎಂದು ಹಿಂದಿ ಭಾಷಾ ಸಂಘದ ಅಧ್ಯಕ್ಷ ಶಿವಾ ನಾಯ್ಕ ಹೇಳಿದರು.

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‍ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಹಾಗೂ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕುಮಟಾ ಪ್ರೌಢಶಾಲೆಗಳ ಹಿಂದಿ ಭಾಷಾ ಶಿಕ್ಷಕರ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೆಕೆಂಡರಿ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ಮಾತನಾಡಿ, ಕೇವಲ ಬೋಧನೆ ಮಾಡುವವನು ಉತ್ತಮ ಶಿಕ್ಷಕನಾಗಲಾರ, ಮಗುವಿನ ಮನಸ್ಸನ್ನು ಅರಿತು ಮಗುವಿನಲ್ಲಿ ಕಲಿಕೆಯನ್ನು ಪ್ರಚೋದಿಸುವವನು ಸಮರ್ಥ ಶಿಕ್ಷಕನಾಗಬಲ್ಲ. ಶಿಕ್ಷಕ ಭೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕುಮಟಾ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಕಾರ್ಯದರ್ಶಿ ಉಮೇಶ ಭಟ್ಟ, ಹಿಂದಿ ಭಾಷೆಯ ಶಿಕ್ಷಕರು ಹೆಚ್ಚು ಸೃಜನಶೀಲರಾಗಿದ್ದಾರೆ ಹೆಚ್ಚೆಚ್ಚು ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸುವುದರ ಜೊತೆಗೆ ಉತ್ತಮ ಫಲಿತಾಂಶ ಬರಲು ಕಾರಣೀಭೂತರಾಗಿದ್ದಾರೆ ಎಂದರು. ಹಿರೇಗುತ್ತಿ ಹೈಸ್ಕೂಲ್ ಅಧ್ಯಾಪಕ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್.ರಾಮು. ಹಿರೇಗುತ್ತಿ ಗುಣಾತ್ಮಕ ಶಿಕ್ಷಣ ನೀಡಬೇಕಾದರೆ ಇಂತಹ ವಿಷಯ ಕಾರ್ಯಗಾರ ಶಿಕ್ಷಕರಿಗೆ ಅತ್ಯಗತ್ಯ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕುಮಟಾ ಹಿಂದಿ ಸಂಘದ ಖಜಾಂಚಿ ವಸಂತ ಶೇಟ್, ಎಮ್.ಎಸ್ ಪಟಗಾರ ಉಪಸ್ಥಿತರಿದ್ದರು. ವಿಶೇಷವಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಮಾಡಬಹುದಾದ ಅನೇಕ ಕ್ರಿಯಾ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ನಾಗಶ್ರೀ ಪಟಗಾರ ಸಂಗಡಿಗರ ಪ್ರಾರ್ಥನೆ ಮತ್ತು ವಿನಯ ಗೌಡ ಸಂಗಡಿಗರ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹಿರೇಗುತ್ತಿ ಹೈಸ್ಕೂಲ್ ಹಿಂದಿ ಶಿಕ್ಷಕಿ ಇಂದಿರಾ ಬಿ. ನಾಯಕ ಸ್ವಾಗತಿಸಿದರು. ಸರ್ಕಾರಿ ಪ್ರೌಢಶಾಲೆ ಅಘನಾಶಿನಿ ಅಧ್ಯಾಪಕಿ ರೇಣುಕಾ ಬಾಳೆಹೊಸುರು ಕಾರ್ಯಕ್ರಮ ನಿರೂಪಿಸಿದರು. ಮಹಾದೇವ ಎಸ್. ಪಟಗಾರ ಸಂತೆಗುಳಿ ವಂದಿಸಿದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.