ಜ.19ಕ್ಕೆ ಕನಕ ಜಯಂತಿ

ಶಿರಸಿ:ತಾ.ಪಂ ಶಿರಸಿ ಹಾಗೂ ತಾಲೂಕಾ ಆಡಳಿತ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಭಕ್ತಶ್ರೇಷ್ಠ ಕನಕದಾಸ ಹಾಗೂ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಜ.19ರಂದು ನಡೆಯಲಿದೆ. ಬೆಳಿಗ್ಗೆ 10 ಘಂಟೆಗೆ ಕನಕದಾಸರ ಭಾವಚಿತ್ರಕ್ಕೆ ಗೌರವ ನಮನ ಹಾಗೂ ಮೆರವಣಿಗೆ ನಡೆಯಿದ್ದು, 11 ಘಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿಶೇಷ ಉಪಸ್ಥಿತಿಯಲ್ಲಿ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶ್ರೀಲತಾ ಕಾಳೇರಮನೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ, ಜಿ.ಪಂ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ್, ಉಷಾ ಹೆಗಡೆ, ಬಸವರಾಜ ದೊಡ್ಮನಿ, ರೂಪಾ ಗಣಪತಿ ನಾಯ್ಕ, ಪ್ರಭಾವತಿ ಗೌಡ, ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ, ಪ್ರಭಾರ ಸಹಾಯಕ ಪೊಲೀಸ್ ಅಧಶಿಕ್ಷಕ ಶಂಕರ ಮಾರಿಹಾಳ, ಟಿಟಿಪಿಐ ಸಿ.ಎಸ್.ನಾಯ್ಕ ಪಾಲ್ಗೊಳ್ಳುವರು.

Categories: ಚಿತ್ರ ಸುದ್ದಿ

Leave A Reply

Your email address will not be published.