ಕಾನ್ಸೂರಿನಲ್ಲಿ ಅಚ್ಚರಿಯ ರೀತಿಯಲ್ಲಿ ತಪ್ಪಿತು ಲಾರಿ-ಬಸ್ ಡಿಕ್ಕಿ

ಸಿದ್ದಾಪುರ: ಲಾರಿ ಚಾಲಕನ ಜಾಣ್ಮೆಯಿಂದ ಬಸ್ಸು-ಲಾರಿ ನಡುವೆ ನಡೆಯಲಿದ್ದ ಮುಖಾಮುಖಿ ಡಿಕ್ಕಿ ತಪ್ಪಿದ ಘಟನೆ ತಾಲೂಕಿನ ಕಾನ್ಸೂರಿನಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಶಿರಸಿ ಕಡೆಯಿಂದ ಬಂದ ಕೆಎಸ್‍ಆರ್‍ಟಿಸಿ ಬಸ್ ಬಾಳೇಸರ ರಸ್ತೆಗೆ ತಿರುಗುವ ವೇಳೆಯಲ್ಲಿ ಸಿದ್ದಾಪುರ ಮಾರ್ಗವಾಗಿ ವೇಗದಿಂದ ಬರುತ್ತಿದ್ದ ಲಾರಿಯ ಚಾಲಕ ಸಡನ್ ಆಗಿ ಬ್ರೇಕ್ ಹಾಕುವ ಮೂಲಕ ನಡೆಯಬೇಕಿದ್ದ ಭಾರೀ ಅವಘಡವನ್ನು ತಪ್ಪಿಸಿದ್ದಾನೆ. ನೋಡುಗರಲ್ಲಿ ರೋಮಾಂಚನವನ್ನು ಉಂಟುಮಾಡುವ ಈ ಸನ್ನಿವೇಶವು ಸ್ಥಳೀಯ ನಿವಾಸಿ ಪತ್ರಕರ್ತ ರಾಜು ಕಾನಸೂರು ಅವರ ಕಛೇರಿಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.