ಶಿರಸಿ ಅರಣ್ಯ ಮಹಾವಿದ್ಯಾಲಯ ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ

ಕಾರವಾರ: ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ಜೂನಿಯರ್ ರಿಸರ್ಚ್ ಫೆಲೋ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಎಂಎಸ್ಸಿ (ಅರಣ್ಯ), ಎಂಎಸ್ಸಿ (ಸಸ್ಯಶಾಸ್ತ್ರ), ಎಂಎಸ್ಸಿ (ಕೃಷಿ) ವಿದ್ಯಾಭ್ಯಾಸ ಮಾಡಿರುವ ಪದವಿಧರರು ಎರಡು ತಿಂಗಳ ತಾತ್ಕಾಲಿಕ ಹುದ್ದೆಗೆ ಅರ್ಹರಿದ್ದು ಜ. 23 ಬೆಳಗ್ಗೆ 11ಗಂಟೆಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸೂಕ್ತ ಮೂಲ ದಾಖಲೆಗಳೊಂದಿಗೆ ಡೀನ್ (ಅರಣ್ಯ), ಅರಣ್ಯ ಮಹಾವಿದ್ಯಾಲಯ, ಶಿರಸಿ ಕಾರ್ಯಾಲಯಕ್ಕೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08384 2216146 ಇಲ್ಲಿ ಸಂಪರ್ಕಿಸಬಹುದಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.