ಟ್ಯಾಂಕರ್ ನೀರು ಪೂರೈಕೆಗೆ ದರಪಟ್ಟಿ ಆಹ್ವಾನ

ಕಾರವಾರ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ನೀರಿನ ಟ್ಯಾಂಕರ್ ಗುತ್ತಿಗೆದಾರರಿಂದ ದರಪಟ್ಟಿ ಆಹ್ವಾನಿಸಲಾಗಿದೆ.

ನಿಯಮಾನುಸಾರ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಆಸಕ್ತಿಯುಳ್ಳು ಗುತ್ತಿಗೆದಾರರು ತಮ್ಮ ದರಪಟ್ಟಿಯನ್ನು ಜ.21ರ ಮಧ್ಯಾಹ್ನ 1.30ರೊಳಗೆ ಸೀಲು ಮಾಡಿದ ಲಕೋಟೆಯಲ್ಲಿ ಕಾರವಾರದ ತಹಸೀಲ್ದಾರ್ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ. ಜ.21 ರ ಸಂಜೆ 5ಗಂಟೆಗೆ ಸ್ವೀಕರಿಸಿದ ಲಕೋಟೆಗಳನ್ನು ನಿಯಮಾನುಸಾರ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08382-226331 ಇಲ್ಲಿಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.