ಜ.12ರಂದು ಕೊಂಕಣಿ-ಕನ್ನಡ ದ್ವಿಭಾಷಾ ಕವಿಗೋಷ್ಠಿ

ಕಾರವಾರ: ಕೊಂಕಣಿ-ಕನ್ನಡ ದ್ವಿಭಾಷಾ ಕವಿಗೋಷ್ಠಿ ಮತ್ತು ವಿಚಾರಗೋಷ್ಠಿ ಜ.12 ರಂದು ಬೆಳಿಗ್ಗೆ 10.30ಕ್ಕೆ ಅಂಕೋಲಾದ ರೈತ ಭವನ ಪಿ.ಎಂ. ಹೈಸ್ಕೂಲ್‍ನಲ್ಲಿ ನಡೆಯಲಿದೆ.

ಸಾಹಿತಿ ವಿಷ್ಣು ನಾಯ್ಕ ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ ಅಧ್ಯಕ್ಷತೆ ವಹಿಸುವರು, ಪಿ.ಎಂ. ಹೈಸ್ಕೂಲ್ ಪ್ರಾಚಾರ್ಯ ರವೀಂದ್ರ ಕಿಣಿ, ಕಥೋಲಿಕ್ ಚರ್ಚ್ ಧರ್ಮಗುರು ಫಾ.ಜೋನ್ ಅಬೆಲ್ ಡಿಸೋಜ, ಮತ್ತಿತರರು ಭಾಗವಹಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ ಅಮ್ಮೆಂಬಳ ಆನಂದ, ಹೊಸದಿಗಂತ ಪತ್ರಿಕೆ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥ ವಿಠಲದಾಸ್ ಕಾಮತ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಲ್ಲದೆ ವಿವಿಧ ಕವಿಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಸದಸ್ಯ ಉಲ್ಲಾಸ್ ಪ್ರಭು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.