ಜ.12ಕ್ಕೆ ಎಂ.ಎಂ.ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

ಶಿರಸಿ: ನಗರದ ಎಂ.ಎಂ.ಕಾಲೇಜಿನಲ್ಲಿ ‘ಸ್ವಾಮಿ ವಿವೇಕಾನಂದ ಜಯಂತಿ’ ಪ್ರಯುಕ್ತ ಜ.12 ಶನಿವಾರ ಬೆಳಿಗ್ಗೆ 10 ಘಂಟೆಯಿಂದ ಉಪನ್ಯಾಸ ಕಾರ್ಯಕ್ರಮವನ್ನ ಇಲ್ಲಿನ ದೃಶ್ಯ-ಶ್ರವಣ ಸಭಾಭವನದಲ್ಲಿ ಆಯೋಜಿಸಿದೆ.

ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ, ಐ.ಕ್ಯು.ಏ.ಸಿ., ಎನ್.ಎಸ್.ಎಸ್., ಎನ್.ಸಿ.ಸಿ.,ಸ್ಕೌಟ್ಸ್ ಮತ್ತು ಗೈಡ್ಸ್, ಭಾರತೀಯ ಶಿಕ್ಷಣ ಮಂಡಲ, ಶಿರಸಿ ಹಾಗೂ ಸಮರ್ಥ ಭಾರತ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಉಪನ್ಯಾಸಕರಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿಷ್ಣು ಜೋಷಿ ಉಪಸ್ಥಿತರಿರುವರು. ಕಾಲೇಜು ಉಪಸಮಿತಿ ಅಧ್ಯಕ್ಷ ಪ್ರೊ. ಎಂ. ಎಂ. ಹೆಗಡೆ, ಬಕ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಾಲೇಜು ಪ್ರಾಚಾರ್ಯ ಡಾ. ಏ. ಕೆ. ಕಿಣಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.