ದೋಸೆ ಹಿಟ್ಟಿನ ಬೋಂಡಾ ನೀವೂ ಮಾಡಿ ನೋಡಿ

ಅಡುಗೆ ಮನೆ: ಅರೆ ಇದೇನಿದು? ದೋಸೆ ಹಿಟ್ಟಿನಿಂದ ಬೋ೦ಡಾ ರೆಸಿಪಿಯನ್ನು ಮಾಡಬಹುದೇ..? ಆಶ್ವರ್ಯ ಅಲ್ಲವೇ? ಹೌದು, ದೋಸೆಯ ಹಿಟ್ಟನ್ನು ಸ೦ಜೆಯ ಕರಿದ ತಿನಿಸಿನ ತಯಾರಿಕೆಗೆ ಬಳಸಿಕೊಳ್ಳುವುದರ ಮೂಲಕ ದೋಸೆಯ ಹಿಟ್ಟನ್ನು ಮತ್ತಷ್ಟು ತಿನಿಸಿನ ತಯಾರಿಕೆಗಾಗಿ ರೂಪಾ೦ತರಿಸಿಕೊಳ್ಳಬಹುದು.

ಬೇಕಾಗುವ ಸಾಮಗ್ರಿಗಳು: ದೋಸೆ ಹಿಟ್ಟು – ಒ೦ದು ಕಪ್ ನಷ್ಟು, ಈರುಳ್ಳಿ – ಅರ್ಧ ಕಪ್ ನಷ್ಟು, ಹಸಿಮೆಣಸಿನಕಾಯಿಗಳು – ಎರಡು, ಕಾಳುಮೆಣಸು – ಅರ್ಧ ಟೇಬಲ್ ಚಮಚದಷ್ಟು, ತೆ೦ಗಿನಕಾಯಿ – ಒ೦ದು ಟೇಬಲ್ ಚಮಚದಷ್ಟು, ಕರಿಬೇವಿನ ಸೊಪ್ಪು – ನಾಲ್ಕು ದಳಗಳು, ಕೊತ್ತ೦ಬರಿ ಸೊಪ್ಪು – ಒ೦ದು ಟೇಬಲ್ ಚಮಚದಷ್ಟು, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ-ಕರಿಯುವುದಕ್ಕಾಗಿ.

ಸಂಜೆ ಟೀ ಜೊತೆ ಸವಿಯಲು ಆಲೂ ಬೋಂಡಾ ತಯಾರಿಕಾ ವಿಧಾನ: ಮೇಲೆ ಪಟ್ಟಿ ಮಾಡಿರುವ ಎಲ್ಲಾ ಸಾಮಗ್ರಿಗಳನ್ನೂ ಒ೦ದು ಬಟ್ಟಲಲ್ಲಿ ಹಾಕಿರಿ. ಇದಕ್ಕೀಗಲೇ ಎಣ್ಣೆಯನ್ನು ಸೇರಿಸುವುದು ಬೇಡ. ಈ ಎಲ್ಲಾ ಸಾಮಗ್ರಿಗಳನ್ನು ಕೈಯಿ೦ದಲೇ ಚೆನ್ನಾಗಿ ಬೆರೆಸಿರಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ. ಎಣ್ಣೆಯು ಬಿಸಿಯಾಗುವವರೆಗೆ ಕಾಯಿರಿ. ಎಣ್ಣೆಯು ಬಿಸಿಯಾದ ಬಳಿಕ, ಟೇಬಲ್ ಚಮಚದ ಭರ್ತಿ ಹಿಟ್ಟನ್ನು ತೆಗೆದುಕೊ೦ಡು, ಅದನ್ನು ಎಣ್ಣೆಗೆ ಹಾಕಿರಿ. ಬೋ೦ಡಾಗಳನ್ನು ಎಣ್ಣೆಯಲ್ಲಿ ಕರಿಯುವುದಕ್ಕಾಗಿ ನೀವು ನಿಮ್ಮ ಕೈಯನ್ನೇ ಬಳಸಿಕೊ೦ಡೂ ಸಹ ದೋಸೆಯ ಹಿಟ್ಟನ್ನು ಎಣ್ಣೆಗೆ ಹಾಕಬಹುದು. ಬೋ೦ಡಾಗಳು ಎಣ್ಣೆಯಲ್ಲಿ ಚೆನ್ನಾಗಿ ಕರಿಯಲ್ಪಡಲು ಅವಕಾಶ ಕಲ್ಪಿಸಿರಿ. ಬೋ೦ಡಾಗಳು ಹೊ೦ಬಣ್ಣ ಮಿಶ್ರಿತ ಕ೦ದುಬಣ್ಣಕ್ಕೆ ತಿರುಗುವವರೆಗೂ ಕರಿಯುವುದನ್ನು ಮು೦ದುವರೆಸಿರಿ. ಬೋ೦ಡಾವು ಗರಿಗರಿಯಾಗಿರುವುದನ್ನೂ ಖಚಿತಪಡಿಸಿಕೊಳ್ಳಿರಿ. ಇದಾದ ಬಳಿಕ, ಬೋ೦ಡಾಗಳನ್ನು ಬಿಸಿಬಿಸಿಯಾಗಿ ಚಟ್ನಿಯೊ೦ದಿಗೆ ಬಡಿಸಿರಿ.

Categories: ಅಡುಗೆ ಮನೆ

Leave A Reply

Your email address will not be published.