ರುಚಿಯಾದ ಉತ್ತಪ್ಪ ಮಾಡಿ ಸವಿಯಿರಿ

ಅಡುಗೆ ಮನೆ: ಬೇಕಾಗುವ ಪದಾರ್ಥಗಳು: 1 ಕೆ.ಜಿ ಕುಸುಬುಲು ಅಕ್ಕಿ, ಉದ್ದಿನ ಬೇಳೆ 1/4 ಕೆ.ಜಿ., 100 ಗ್ರಾಂ ಈರುಳ್ಳಿ, 8 ಹಸಿ ಮೆಣಸಿನಕಾಯಿ, ಸಣ್ಣ ತುಂಡು ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು-ತುಪ್ಪ ಅಗತ್ಯಕ್ಕೆ ತಕ್ಕಷ್ಟು.

ಮಾಡುವ ವಿಧಾನ: ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ನೆನೆ ಹಾಕಿ 8 ಗಂಟೆ ಬಿಟ್ಟು ನೆಂದ ಬಳಿಕ ಒರಳಿಗೆ ಹಾಕಿಕೊಂಡು ರುಬ್ಬುವುದು. ರುಬ್ಬಿದ ಹಿಟ್ಟಿಗೆ ಉಪ್ಪು ಹಾಕಿ ಅರ್ಧ ಗಂಟೆ ಬಿಡಿ. ಆಮೇಲೆ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಈರುಳ್ಳಿ, ಸಣ್ಣಗೆ ಹೆಚ್ಚಿ ಹಾಕಿರಿ. ಎಲ್ಲಾ ಚೆನ್ನಾಗಿ ಮಿಶ್ರಣ ಮಾಡಿದ ಮೇಲೆ ಒಲೆಯ ಮೇಲೆ ಕಾವಲಿ ಇಟ್ಟು ಕಾವಲಿ ಬಿಸಿಯಾದ ನಂತರ ತುಪ್ಪ ಸವರಿ, ಹಿಟ್ಟನ್ನು ಕಾವಲಿಯ ಮೇಲೆ ಹುಯ್ದು ಬೇಯಿಸಿ. ಎರಡೂ ಕಡೆ ಚೆನ್ನಾಗಿ ಬೆಂದ ನಂತರ ಚಟ್ನಿ ಅಥವಾ ಉಪ್ಪಿನಕಾಯಿ ಜೊತೆಗೆ ತಿನ್ನಿರಿ.

Categories: ಅಡುಗೆ ಮನೆ

Leave A Reply

Your email address will not be published.