ಗಾಯಾಳುಗಳಿಗೆ ಶಾಸಕ ದಿನಕರ ಶೆಟ್ಟಿ ಸಾಂತ್ವನ


ಕುಮಟಾ: ತಾಲೂಕಿನ ಮಣಕಿ ಚರ್ಚ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕರಸಾ ಬಸ್ ಹಾಗೂ ಲಾರಿಯ ನಡುವಿನ ಅಪಘಾತದ ವಿಷಯ ತಿಳಿದ ತಕ್ಷಣ ಶಾಸಕ ದಿನಕರ ಶೆಟ್ಟಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ತಿಳಿಸಿದ್ದಲ್ಲದೆ, ಕೆಎಸ್‍ಆರ್‍ಟಿಸಿ ಇಲಾಖೆಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿ, ಇಲಾಖೆಯ ವತಿಯಿಂದ ಗಾಯಾಳುಗಳ ಕುಟುಂಬಕ್ಕೆ ಪ್ರಥಮ ಚಿಕೆತ್ಸೆಯ ಸಲುವಾಗಿ ತಲಾ 5000 ಹಾಗೂ ಮೂರೂ ಸಾವಿರದಂತೆ ಧನ ಸಹಾಯ ಮಾಡಿದರು. ಹೆಚ್ಚಿನ ಚಿಕಿತ್ಸೆಗೆ ಒಳಪಟ್ಟ ಗಾಯಾಳುಗಳಿಗೆ ಮಂಗಳೂರು ಹಾಗೂ ಮಣಿಪಾಲಿನ ಆಸ್ಪತ್ರೆಗೆ ದೂರವಾಣಿ ಮೂಲಕ ಸಂಪರ್ಕಿಸಿ, ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲು ನೆರವಾದರು.

Categories: ಚಿತ್ರ ಸುದ್ದಿ

Leave A Reply

Your email address will not be published.