Slide
Slide
Slide
previous arrow
next arrow

2018ರ ಪೂರ್ವ ಜಿಪಿಎಸ್ ಮಾಡಿಕೊಂಡವರನ್ನು ತೆರವು ಮಾಡಲು ಬಿಡಲ್ಲ: ವೈದ್ಯ

300x250 AD

ಹೊನ್ನಾವರ: ಪಟ್ಟಣದ ಮಿನಿವಿಧಾನಸೌಧದಲ್ಲಿ ಸಚಿವ ಮಂಕಾಳ ವೈದ್ಯ ಅವರು ವಿವಿಧ ಇಲಾಖೆಯ ಉಪಸ್ಥಿತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸಾರ್ವಜನಿಕರ ಸಮಸ್ಯೆ ಬೇರೆ ಬೇರೆ ಇಲಾಖೆಯಿಂದಾಗಬೇಕಾದ ಕೆಲಸ ಕಾರ್ಯ ಕಳೆದ ನಾಲ್ಕೈದು ವರ್ಷಗಳಿಂದ ಬಗೆಹರಿಯದೆ ಹಾಗೆಯೇ ಉಳಿದಿತ್ತು. ಜನರ ಅಹವಾಲು ಸ್ವೀಕರಿಸಿದ್ದೇನೆ. ಅವರಿಗೆ ಅನುಕೂಲ ಆಗಬೇಕು. ಕೇವಲ ಅವರು ಬಂದು ನನಗೆ ಅರ್ಜಿ ಕೊಡೋದು, ನಾನು ಅವರಿಗೆ ಹೇಳೋದು ಕೆಲಸ ಮಾಡದೆ ಇರೋದು ಆಗಬಾರದು ಎನ್ನುವ ದೃಷ್ಟಿಯಿಂದ ಅಧಿಕಾರಿಗಳನ್ನು ಸ್ಥಳದಲ್ಲಿ ಉಪಸ್ಥಿತರಿರಲು ಸೂಚಿಸಿ, ತಾಲೂಕಿನ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರದಿಂದ ಮತ್ತೆ ಇಡೀ ಜಿಲ್ಲೆಯಿಂದ ಎಲ್ಲವರಿಗೂ ಸ್ಪಂದಿಸಿದ್ದೇನೆ ಎಂದರು.

ತಾಲೂಕಿನಲ್ಲಿ ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸುವ ವಿಚಾರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಏಳು ಎಕರೆ ಅತಿಕ್ರಮಣ ಜಾಗ ಜಿಪಿಎಸ್ ಮಾಡಿ ಕೊಟ್ಟಿದ್ದಾರೆ. ಒಂದುವರೆ ಎಕರೆ ಜಾಗ ಮಾಲ್ಕಿ ಇದೆ. ಜನರಿಗೆ ಅನುಕೂಲ ಆಗಿದೆ, ಅನುಕೂಲ ಆಗುತ್ತಿದೆ. ಆದರೆ ಮತ್ತೆ ಅತಿಕ್ರಮಣ ಮಾಡುತ್ತಾ ಇರುವುದು ಸರಿಯಲ್ಲ. 2018ರ ಪೂರ್ವದಲ್ಲಿ ಜಿಪಿಎಸ್ ಮಾಡಿಕೊಂಡವರನ್ನು ಯಾವುದೇ ಕಾರಣಕ್ಕೂ ತೆರವು ಮಾಡಲು ಬಿಡುವುದಿಲ್ಲ ಎಂದರು.

ಕಾಸರಕೋಡ್ ವಾಣಿಜ್ಯ ಬಂದರು ಯೋಜನೆ ಬಗ್ಗೆ ಪ್ರತಿಕ್ರಿಯಿಸಿ ಈ ವಿಚಾರ ನ್ಯಾಯಾಲಯದಲ್ಲಿದೆ. ಜನಕ್ಕೆ ಅನುಕೂಲ ಆಗುತ್ತದೆ ಅಂದರೆ ಮಾಡಬೇಕಿತ್ತು. ಜನರಿಗೆ ಅನುಕೂಲ ಇಲ್ಲ ಎಂದು ಅಲ್ಲಿನ ಸ್ಥಳೀಯರೆ ವಿರೋಧ ಮಾಡಿದ್ದಾರೆ. ಅದರ ಬಗ್ಗೆ ನಾನು ಏನು ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಎಲ್ಲವೂ ಜನರ ನಿರೀಕ್ಷೆಗೆ ತಕ್ಕಂತೆ ಇರುತ್ತದೆ ಜನರ ವಿರುದ್ಧ ಯಾವುದು ಇರುವುದಿಲ್ಲ ಎಂದರು.

300x250 AD

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡದಿದ್ದರೆ ನಾನು ಮಾಡುತ್ತೇನೆ,ಅಂದು ಹೇಳಿದ್ದೇನೆ. ಇಂದು ಆ ಮಾತಿಗೆ ಬದ್ಧನಾಗಿದ್ದೇನೆ. ಶರಾವತಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗ್ರಾಮೀಣ ಭಾಗಕ್ಕು ಹಂತಹಂತವಾಗಿ ಲಭಿಸಲಿದೆ, ನೀರು, ಆರೋಗ್ಯ ಮೂಲಭೂತ ಸೌಕರ್ಯಗಳಿಗೆ ಎಲ್ಲಿಯು ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣ್‌ಕುಮಾರ್ ನಾಯಕ್ ತಮ್ಮ ಕಕ್ಷಿದಾರರ ಇ-ಸ್ವತ್ತು ದಾಖಲೆ ಮಾಡಿಕೊಡಲು ಕೇಳಲು ಹೋದಾಗ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವ ಕುರಿತು ವಕೀಲ ವಿಶ್ವನಾಥ ಜಿ.ಯಾಜಿ ಸಚಿವರಿಗೆ ಮನವಿ ಸಲ್ಲಿಸಿದರು. ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಸಭ್ಯತೆಯಿಂದ ವರ್ತಿಸಿ, ನಿಮಗೆ ಜನರ ಕೆಲಸ ಮಾಡಲಾಗದಿದ್ದರೆ ಹೇಳಿ, ನಿಮ್ಮ ಬಗ್ಗೆ ಬಹಳ ದೂರುಗಳಿದೆ. ಇಲ್ಲಿ ಕೆಲಸ ಮಾಡಲಾಗದಿದ್ದರೆ ನಿಮ್ಮಮೇಲೆ ಕಾನೂನು ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದು ತರಾಟೆಗೆ ತೆಗೆದುಕೊಂಡರು.

Share This
300x250 AD
300x250 AD
300x250 AD
Back to top