ವಿಜ್ಞಾನ ವಸ್ತುಪ್ರದರ್ಶನ: ನಮನ್ ರಾಷ್ಟ್ರಮಟ್ಟಕ್ಕೆ

ಶಿರಸಿ: ಧಾರವಾಡದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಇನ್ಸಪೈಯರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ತಾಲೂಕಿನ ಭೈರುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ನಮನ್.ಎನ್.ಭಟ್ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾನೆ.

ಈತನು ಮೂಲತಃ ಹೆಗ್ಗರಣಿಯ ಹೊಸ್ತೋಟದವನಾಗಿದ್ದು, ನಾಗೇಂದ್ರ ಭಟ್ಟ ಮತ್ತು ಪ್ರತಿಮಾ ದಂಪತಿಯ ಪುತ್ರನಾಗಿದ್ದಾನೆ.ಈತನ ಸಾಧನೆಯನ್ನು ಮೆಚ್ಚಿ ಶಾಲೆ ಹಾಗು ಪಾಲಕರು ಮುಂದಿನ ಹಂತದಲ್ಲೂ ಇದೇ ರೀತಿ ಜಯಗಳಿಸಲಿ ಎಂದು ಶುಭ ಹಾರೈಸಿದ್ದಾನೆ. ಈತನಿಗೆ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಸಂತ ಹೆಗಡೆ ಮಾರ್ಗದರ್ಶನ ಮಾಡಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.