ಕಲ್ಪತರು ಸಂಘ ಆವಾರದಲ್ಲಿ ರಕ್ತದಾನ ಶಿಬಿರ ಯಶಸ್ವಿ


ಯಲ್ಲಾಪುರ: ಅರುಣೋದಯ ಯುವಕ ಸಂಘ ಹೆಗ್ಗಾರ್ ಮತ್ತು ತಾಲೂಕು ಯುವ ಒಕ್ಕೂಟ ಇದರ ಆಶ್ರಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 94 ನೆಯ ಜನ್ಮದಿನದ ಪ್ರಯುಕ್ತ ಹೆಗ್ಗಾರ್ ಕಲ್ಪತರು ಸಂಘದ ಆವಾರದಲ್ಲಿ ರಕ್ತದಾನ ಶಿಬಿರ ನಡೆಯಿತು.

ಡೋಂಗ್ರಿ ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ರಕ್ತದಾನ ಮಾಡುವ ಮೂಲಕ ಉಧ್ಘಾಟಿಸಿದರು. ಹಿರಿಯರಾದ ಗಣಪತಿ ಗುಡ್ಡೆ, ಯುವ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಗಾಂವ್ಕಾರ್,ಪ್ರಸನ್ನ ಗುಡ್ಡೆ, ಸುಧಾಕರ ಭಟ್ಟ, ರಾಘವೇಂದ್ರ ಕಲಗಾರೆ, ಧಾರವಾಡ ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ ಇದ್ದರು. ಸುಮಾರು 50 ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.

Categories: ಚಿತ್ರ ಸುದ್ದಿ

Leave A Reply

Your email address will not be published.