ರುಚಿ-ರುಚಿಯಾದ ಆಲೂ ಪುರಿ ಸವಿದು ನೋಡಿ..


ಅಡುಗೆ ಮನೆ: ಹುರಿದ ಮತ್ತು ಗರಿಗರಿಯಾದ ತಿನಿಸು ಮಕ್ಕಳಿಗೆ ಅಚ್ಚುಮೆಚ್ಚು. ನೀವು ಯಾವುದೇ ಡಿಶ್‌ಗೆ ಆಲೂಗಡ್ಡೆ ಹಾಕಿದರೆ ಸಾಕು, ಮಕ್ಕಳು ಅದನ್ನು ಹೆಚ್ಚು ಇಷ್ಟಪಡುತ್ತಾರೆ. ದೊಡ್ಡವರು ಕೂಡಾ ಈ ಆಲೂ ಪುರಿಯನ್ನು ಇಷ್ಟಪಡುತ್ತಾರೆ.

ಬೇಕಾಗುವ ಸಾಮಾಗ್ರಿಗಳು: ಗೋಧಿ/ಮೈದಾ – 1 ಕಪ್‌ಗಳು, ಆಲೂಗಡ್ಡೆ – 150 ಗ್ರಾಂ, ಕೊತ್ತಂಬರಿ ಎಲೆಗಳು – 1 ಗೊಂಚಲು, ಬೆಳ್ಳುಳ್ಳಿ – 6 ಎಸಳು, ಹಸಿ ಮೆಣಸು – 4 ತುಂಡುಗಳು, ಎಣ್ಣೆ – ಕರಿಯಲು, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಮೊದಲಿಗೆ ನೀವು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಬೇಕು. ನಂತರ ಅದರ ಸಿಪ್ಪೆ ತೆಗೆದು ಹುಡಿ ಮಾಡಿ. ಈಗ ಕೊತ್ತಂಬರಿ ಎಲೆಯನ್ನು ನುಣ್ಣಗೆ ರುಬ್ಬಿ, ಹಸಿಮೆಣಸು ಬೆಳ್ಳುಳ್ಳಿ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಹುಡಿ ಮಾಡಿದ ಆಲೂಗಡ್ಡೆಯನ್ನು ಪೇಸ್ಟ್‌ಗೆ ಹಾಕಿ. ಉಪ್ಪು ಸೇರಿಸಿ. ಈಗ ಗೋಧಿ ಅಥವಾ ಮೈದಾ ತೆಗೆದುಕೊಂಡು ನೀರು ಎಣ್ಣೆ ಸಮ ಪ್ರಮಾಣದಲ್ಲಿ ಬೆರೆಸಿ ಹಿಟ್ಟು ನಾದಿಕೊಳ್ಳಿ. ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಆಲೂ ಮಿಶ್ರಣದೊಂದಿಗೆ ಸ್ಟಫ್ ಮಾಡಿ. ರೋಲ್ ತೆಗೆದುಕೊಂಡು ಉಂಡೆಯನ್ನು ಪೂರಿ ಆಕಾರಕ್ಕೆ ಲಟ್ಟಿಸಿ. ಪ್ಯಾನ್‌ಗೆ ರೀಫೈನ್ಡ್ ಎಣ್ಣೆ ಹಾಕಿ ಅದು ಬಿಸಿಯಾಗುವವರೆಗೆ ಕಾಯಿರಿ. ಎಣ್ಣೆ ಬಿಸಿಯಾದೊಡನೆ, ಪೂರಿಯನ್ನು ಗೋಲ್ಡನ್ ಬಣ್ಣ ಬರುವವರೆಗೆ ಕಾಯಿಸಿ. ಪುರಿಯನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಹಾಕಿದ ತಟ್ಟೆಯಲ್ಲಿರಿಸಿ ಅದರಲ್ಲಿರುವ ಹೆಚ್ಚು ಎಣ್ಣೆಯನ್ನು ಟಿಶ್ಯೂ ಹೀರಿಕೊಳ್ಳುತ್ತದೆ. ಈ ರುಚಿಕರ ಡಿಶ್ ಅನ್ನು ಮೊಸರಿಗೆ ಅದ್ದಿ ಸೇವಿಸಿ.

 

Categories: ಅಡುಗೆ ಮನೆ

Leave A Reply

Your email address will not be published.