ರುಚಿಕರ ಬದನೆಕಾಯೆ ಚಟ್ನಿ ಸವಿದು ನೋಡಿ


ಅಡುಗೆಮನೆ: ಕೆಲವೇ ನಿಮಿಷದಲ್ಲಿ ಬದನೆಕಾಯಿ ಚಟ್ನಿಯನ್ನು ತಯಾರಿಸುವುದರ ಜೊತೆ ಇದನ್ನು ಬೇಯಿಸಿ ಮಾಡುವುದರಿಂದ ಹಾಳಾಗುವ ಸಂಭವ ಕೂಡ ಕಡಿಮೆಯೇ.

ಬೇಕಾಗುವ ಸಾಮಾಗ್ರಿ: ಸಣ್ಣ ಬದನೆಕಾಯಿ – 4, ಕಡಲೆ ಕಾಳು 2 – ಚಮಚ, ಹಸಿಮೆಣಸು-2, ಕೊತ್ತಂಬರಿ ಸೊಪ್ಪು -1/2 ಕಪ್, ತುರಿದ ತೆಂಗಿನ ಕಾಯಿ 1-2 ಚಮಚ, ಬೆಳ್ಳುಳ್ಳಿ ಎಸಳು- 2, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 1 ಚಮಚ, ಸಾಸಿವೆ 1/2 ಚಮಚ, ಕರಿಬೇವಿನೆಲೆ 2-3 ಎಸಳು.

ಮಾಡುವ ವಿಧಾನ: ಒಂದು ಕಪ್ ನೀರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿ. ಇದಕ್ಕೆ ತುಂಡರಿಸಿದ ಬದನೆ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಇದನ್ನು ನೀರಿನಿಂದ ತೆಗೆದು ತಣ್ಣಗಾಗುವರೆಗೆ ಸ್ವಲ್ಪ ಹೊತ್ತು ಕಾಯಿರಿ. ಬೆಂದ ಬದನೆಕಾಯಿ, ಬೆಳ್ಳುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹುರಿದ ಕಡಲೆಕಾಳು, ಉಪ್ಪು ಮತ್ತು ತೆಂಗಿನ ತುರಿಯನ್ನು ಮಿಕ್ಸರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬದನೆ ಬೇಯಿಸಿದ ನೀರನ್ನು ರುಬ್ಬುವಾಗ ಬಳಸಿ. ತದನಂತರ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಳ್ಳಿ ಇದಕ್ಕೆ ಸಾಸಿವೆಯನ್ನು ಹಾಕಿ. ಇದು ಸಿಡಿಯುತ್ತಿದ್ದಂತೆ ಕರಿ ಬೇವಿನ ಎಲೆಯನ್ನು ಹಾಕಿ ಒಗ್ಗರಣೆ ಸಿದ್ಧಪಡಿಸಿಕೊಳ್ಳಿ. ನಂತರ ಚಟ್ನಿಗೆ ಈ ಒಗ್ಗರಣೆಯನ್ನು ಸೇರಿಸಿ. ರೊಟ್ಟಿಯೊಂದಿಗೆ ಸವಿಯಲು ಬದನೆ ಚಟ್ನಿ ಹೇಳಿ ಮಾಡಿಸಿದ ಖಾದ್ಯವಾಗಿದೆ.

Categories: ಅಡುಗೆ ಮನೆ

Leave A Reply

Your email address will not be published.