ಚಾಕೊಲೇಟ್ ಬರ್ಫಿ ತಿಂದು ಬಾಯಿ ಸಿಹಿ ಮಾಡಿಕೊಳ್ಳಿ..


ಅಡುಗೆ ಮನೆ: ಬಾಯಲ್ಲಿ ನೀರೂರಿಸುವ ಮಕ್ಕಳಾದಿಯಾಗಿ ದೊಡ್ಡವರಿಗೂ ಇಷ್ಟವಾಗುವ ಚಾಕೊಲೇಟ್ ಬರ್ಫಿ ಮಾಡುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು: ಉಪ್ಪಿಲ್ಲದ ಬೆಣ್ಣೆ – 55 ಗ್ರಾಮ್‎ಗಳು, ಹುಡಿ ಮಾಡಿದ ಸಕ್ಕರೆ – 25 ಗ್ರಾಮ್‎ಗಳು, ಹುಡಿಮಾಡಿದ ಬಿಸ್ಕತ್ತು – 15, ಉಪ್ಪು – ಚಿಟಿಕೆಯಷ್ಟು, ಮಂದಗೊಳಿಸಿದ ಹಾಲು – 125 ಎಮ್ಎಲ್, ತುರಿದ ಕೊಬ್ಬರಿ – 40 ಗ್ರಾಮ್‎ಗಳು, ಮಿಶ್ರಮಾಡಿದ ನಟ್ಸ್ – 50 ಗ್ರಾಮ್‎ಗಳು

ಮಾಡುವ ವಿಧಾನ: ಬರ್ಫಿಯನ್ನು ಸಿದ್ಧಪಡಿಸುವ ವಿಧಾನಕ್ಕೂ ಮುನ್ನ ನೀವು ಒಂದು ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಹುಡಿಮಾಡಿದ ಸಕ್ಕರೆ, ಬಿಸ್ಕತ್ತು ಮತ್ತು ಉಪ್ಪನ್ನು ಜೊತೆಯಾಗಿ ಸೇರಿಸಿ. ನಂತರ ಪಕ್ಕದಲ್ಲಿಡಿ. ಸಾಮಾಗ್ರಿಗಳನ್ನು ಮಿಶ್ರ ಮಾಡುವಾಗ ಅವುಗಳನ್ನು 180 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಲು ಮರೆಯದಿರಿ. ಈಗ ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಕರಗಿಸಿದ ಬೆಣ್ಣೆಯನ್ನು ಸೇರಿಸಿ. ಇದಕ್ಕೆ ಬಿಸ್ಕತ್ತು ಮಿಶ್ರಣವನ್ನು ಸೇರಿಸಿ. ಈಗ ಹುಡಿಮಾಡಿದ ಬಿಸ್ಕತ್ತಿಗೆ ಬಿಸಿ ಮಾಡಿದ ಬೆಣ್ಣೆಯನ್ನು ಸೇರಿಸಿ. ಬೇಕಿಂಗ್ ಟ್ರೇಯನ್ನು ತೆಗೆದುಕೊಳ್ಳಿ ಮತ್ತು ಮಿಶ್ರಣವನ್ನು ಇದಕ್ಕೆ ಹಾಕಿ. ನೆನಪಿಡಿ ಬೇಕಿಂಗ್ ಟ್ರೇಯನ್ನು ಗ್ರೀಸ್ ಮಾಡದಿರಿ ಸಟ್ಟುಗದ ಸಹಾಯದಿಂದ ಅದನ್ನು ಚಪ್ಪಟೆ ಮಾಡಿಕೊಳ್ಳಿ. ತೆಂಗಿನ ತುರಿಯನ್ನು ತೆಗೆದುಕೊಂಡು ಅದರ ಮೇಲೆ ಸಿಂಪಡಿಸಿ. ತೆಂಗಿನ ತುರಿಯೊಂದಿಗೆ ಪದರವನ್ನು ರಚಿಸಿ. ಈಗ ಚಾಕೊಲೇಟ್ ಚಿಪ್ಸ್ ಅನ್ನು ಮೇಲ್ಭಾಗದಲ್ಲಿ ಸಿಂಪಡಿಸಿ, ತದನಂತರ ಮಂದಗೊಳಿಸಿದ ಹಾಲನ್ನು ಸೇರಿಸಿ. ಮೇಲ್ಭಾಗದಿಂದ ಹುಯ್ಯುತ್ತಾ ಪದರವನ್ನು ನಿರ್ಮಿಸಿಕೊಳ್ಳಿ ಕೊನೆಯ ಹಂತಕ್ಕೆ, ಮಿಶ್ರ ಮಾಡಿದ ನಟ್ಸ್ ಅನ್ನು ಮೇಲ್ಭಾಗದಲ್ಲಿ ಚೆಲ್ಲಿ ಇನ್ನು ಇದನ್ನು 20 ರಿಂದ 30 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ ಮತ್ತು ಬರ್ಫಿ ಆಕಾರದಲ್ಲಿ ಕತ್ತರಿಸಿಕೊಳ್ಳಿ ಚಾಕಲೇಟ್ ಬರ್ಫಿ ಬಡಿಸಲು ಈಗ ಸಿದ್ಧವಾಗಿದೆ.

Categories: ಅಡುಗೆ ಮನೆ

Leave A Reply

Your email address will not be published.