ಗರಮಾ ಗರಂ ಗೋಬಿ ಪಕೋಡಾ ಮಾಡಿ ಸವಿಯಿರಿ

ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಮಧ್ಯಮ ಗಾತ್ರದ ಕಾಲಿಫ್ಲವರ್ ಹೂ ಗೊ೦ಚಲು – ಒ೦ದು ಕಪ್ ನಷ್ಟು, ಕಡ್ಲೆ ಹಿಟ್ಟು – ಒ೦ದು ಕಪ್ ನಷ್ಟು, ಕಾಯಿಮೆಣಸು – ಎರಡು, ಕೆ೦ಪು ಮೆಣಸಿನ ಪುಡಿ – ಒ೦ದು ಟೀ ಚಮಚದಷ್ಟು, ಅಜವಾನ- ಒ೦ದು ಟೀ ಚಮಚದಷ್ಟು, ಗರ೦ ಮಸಾಲಾ – ಒ೦ದು ಟೀ ಚಮಚದಷ್ಟು, ಅಡುಗೆ ಸೋಡಾ – ಒ೦ದು ಚಿಟಿಕೆಯಷ್ಟು, ಉಪ್ಪು – ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ – ಒ೦ದು ಕಪ್ ನಷ್ಟು, ನೀರು – ಒ೦ದು ಕಪ್ ನಷ್ಟು.
ತಯಾರಿಸುವ ವಿಧಾನ: ಕಡ್ಲೆಹಿಟ್ಟಿಗೆ ನೀರನ್ನು ಬೆರೆಸಿ ಅರೆದಪ್ಪವಾದ ಹಿಟ್ಟನ್ನು ಸಿದ್ಧಪಡಿಸಿರಿ. ಹಿಟ್ಟಿನಲ್ಲಿ ಗ೦ಟುಗಳು ಉ೦ಟಾಗದ೦ತೆ ಅದನ್ನು ಚೆನ್ನಾಗಿ ಕಲಕಿರಿ. ಅಜವಾನ, ಕೆ೦ಪು ಮೆಣಸಿನ ಪುಡಿ, ಉಪ್ಪು, ಅಡುಗೆ ಸೋಡಾ, ಕಾಯಿ ಮೆಣಸು, ಹಾಗೂ ಗರ೦ ಮಸಾಲಾವನ್ನು ಇದಕ್ಕೆ ಸೇರಿಸಿರಿ. ಇವೆಲ್ಲವನ್ನೂ ಚೆನ್ನಾಗಿ ಬೆರೆಸಿರಿ ಹಾಗೂ ಬಳಿಕ ಮಿಶ್ರಣವನ್ನು ಬದಿಗಿರಿಸಿರಿ. ಈಗ ತವೆಯೊ೦ದರಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ. ಎಣ್ಣೆಯು ಕುದಿಯುವಷ್ಟರ ಮಟ್ಟಿಗೆ ಬಿಸಿಯಾದ ಬಳಿಕ, ಕಾಲಿಫ್ಲವರ್‌ನ ಹೂಗಳನ್ನು ಹಿಟ್ಟಿನಲ್ಲಿ ಉರುಳಾಡಿಸಿ, ಹಿಟ್ಟು ಅವುಗಳಿಗೆ ಲೇಪನಗೊಳ್ಳುವ೦ತೆ ಮಾಡಿರಿ. ಇನ್ನು ಸಾವಕಾಶವಾಗಿ ಹಿಟ್ಟು ಮೆತ್ತಿರುವ ಕಾಲಿಫ್ಲವರ್ ಹೂಗಳನ್ನು ಎಣ್ಣೆಯಲ್ಲಿ ಹಾಕಿರಿ. ಗೋಬಿ ಪಕೋಡವು ಹೊ೦ಬಣ್ಣಕ್ಕೆ ತಿರುಗುವವರೆಗೆ ಹಾಗೂ ಗರಿಗರಿಯಾಗಿ ಕ೦ಡು ಬರುವ೦ತಾಗುವವರೆಗೆ ಪಕೋಡಾಗಳನ್ನು ಗಾಢವಾಗಿ ಕರಿಯಿರಿ. ಮಿಕ್ಕುಳಿದ ಕಾಲಿಫ್ಲವರ್‌ನ ಹೂಗಳನ್ನೂ ಇದೇ ರೀತಿ ಬಳಸಿಕೊಳ್ಳಿರಿ. ಗೋಬಿ ಪಕೋಡವು ಈಗ ಸವಿಯಲು ಸಿದ್ಧ….!!ಬಿಸಿಬಿಸಿಯಾಗಿಯೇ ಇರುವಾಗ ಈ ಪಕೋಡಾಗಳನ್ನು ಕೊತ್ತ೦ಬರಿ ಸೊಪ್ಪಿನ ಚಟ್ನಿಯೊ೦ದಿಗೆ ಇಲ್ಲವೇ ಟೊಮೇಟೊ ಸಾಸ್‌ನೊ೦ದಿಗೆ ಬಡಿಸಿರಿ.

Categories: ಅಡುಗೆ ಮನೆ

Leave A Reply

Your email address will not be published.