ಬೆಳಗ್ಗಿನ ತಿಂಡಿಗೆ ರುಚಿಕರ ತಾಳಿಪಟ್ಟು


ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು 1 ಬೌಲ್, ತುರಿದ ಸವತೆಕಾಯಿ 1ಕಪ್, ತುರಿದ ಕ್ಯಾರೇಟ್ 1, ಸಣ್ಣಗೆ ಕತ್ತರಿಸಿದ ಹಸಿಮೆಣಸು-3, ಕರಿಬೇವು, ಕೊತ್ತಂಬರಿ ಸೊಪ್ಪು ಸ್ವಲ್ಪ, ಸಣ್ಣದಾಗಿ ಹೆಚ್ಚಿದ ಈರುಳ್ಳಿ 1 ಕಪ್, ಎಣ್ಣೆ ಸ್ವಲ್ಪ, ಬೇಕಾದಲ್ಲಿ ಶುಂಠಿಯನ್ನೂ ಬಳಸಬಹುದು. ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ತುರಿದಿಟ್ಟ ಸವತೆಕಾಯಿಗೆ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು, ನಂತರ ಉಳಿದೆಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲೆಸಿ ಉಂಡೆಮಾಡಿಟ್ಟುಕೊಳ್ಳಿ. ಪ್ಲಾಸ್ಟಿಕ್ ಪೇಪರ್‍ಗೆ ಎಣ್ಣೆಯನ್ನು ಸವರಿ ಉಂಡೆಯನ್ನಿಟ್ಟು ಚಪ್ಪಟೆಯಾಕಾರದಲ್ಲಿ ತಟ್ಟಿರಿ. ನಂತರ ಒಲೆಯ ಮೇಲೆ ಕಾವಲಿಯನ್ನು ಬಿಸಿಗಿಟ್ಟು ತಟ್ಟಿಟ್ಟ ತಾಳಿಪೆಟ್ಟನ್ನು ಹಾಕಿ ಅದರ ಮೇಲೆ ಒಂದು ಚಮಚ ಎಣ್ಣೆಯನ್ನು ಬಿಟ್ಟು ಕೆಂಪಗಾಗುವವರೆಗೂ ಎರಡೂ ಮೈಯನ್ನು ಚೆನ್ನಾಗಿ ಬೇಯಿಸಿದರೆ ತಾಳಿಪಟ್ಟು ಸವಿಯಲು ಸಿದ್ಧ. ಚೆನ್ನಾಗಿ ರೋಸ್ಟ್ ಮಾಡಿ ಇದನ್ನು ಬೆಣ್ಣೆಜೊತೆಗೆ ಸವಿದರೆ ಇನ್ನೂ ಸ್ವಾದಿಷ್ಟವಾದ ರುಚಿಯನ್ನು ನೀಡುತ್ತದೆ. ಬೆಣ್ಣೆ ಸೇರದಿರುವರು ಹಾಗೆಯೂ, ಚಟ್ನಿ ಜೊತೆಗೂ ಸವಿಯಬಹುದಾಗಿದೆ.

Categories: ಅಡುಗೆ ಮನೆ

Leave A Reply

Your email address will not be published.