ಸುವಿಚಾರ

ಅಪಕುರ್ವನ್ನಪಿ ಪ್ರಾಯಃ ಪ್ರಾಪ್ನೋತಿ ಮಹತಃ ಫಲಮ್

ಔರ್ವಂ ದಹಂತಮೇವಾಗ್ನಿಂ ಸಂತರ್ಪಯತಿ ಸಾಗರಃ ||

ದೊಡ್ಡ ಮನಸಿನ ಜನ ಅಥವಾ ಮಹಾತ್ಮರು ಅಂತಿರುತ್ತಾರಲ್ಲ, ಅವರಿಗೆ ಅಪಕಾರ ಅನ್ನುವುದೇ ಗೊತ್ತಿಲ್ಲ. ಸದಾ ಇನ್ನೊಬ್ಬರಿಗೆ ಒಳಿತನ್ನು ಮಾಡುವುದೇ ಅವರ ಸ್ವಭಾವ. ಯಾರೋ ಬಂದು ಅಪಕಾರ ಮಾಡುತ್ತಿದ್ದರೂ ಅವರಿಗೂ ಸಹ ಆ ಅಪಕಾರಿಯು ಅವರಿಂದ ಒಳ್ಳೆಯದನ್ನೇ ಪಡೆಯುತ್ತಾನೆ. ನೋಡಿ, ವಾಡವಾಗ್ನಿ ಅಂತೊಂದುಬಗೆಯ ಸಮುದ್ರಾಗ್ನಿ ಇದೆ. ಅದು ಸಮುದ್ರದ ನೀರನ್ನೇ ಇಂಧನದಂತೆ ಬಳಸಿಕೊಂಡು ಅದರ ಒಡಲನ್ನೇ ಸುಡುವ ಅಗ್ನಿ. ಹಾಗೆ ಸುಡುವ ಅಗ್ನಿಗೂ ಸಹ ಸಮುದ್ರವೆಂಬ ಮಹಾತ್ಮನು ತನ್ನ ನೀರನ್ನೇ ಒದಗಿಸಿ ಸಂತೃಪ್ತಿಗೊಳಿಸುತ್ತಾನೆ.  ಲೋಕದಲ್ಲಿ ಮಹಾತ್ಮರು ಸಮುದ್ರದಂತೆ, ಅವರು ಅಪಕಾರಿಗೂ ಸಹ ಉಪಕಾರವನ್ನೇ ಮಾಡುತ್ತಾರೆ.

–  ಶ್ರೀ ನವೀನ ಗಂಗೋತ್ರಿ

 

Categories: ಸುವಿಚಾರ

Leave A Reply

Your email address will not be published.