ಸಿದ್ದಾಪುರ ಪಿಎಸ್‍ಐ ನಿತ್ಯಾನಂದ ಗೌಡಗೆ ಹರಗಿ ಊರವರಿಂದ ಸನ್ಮಾನ


ಸಿದ್ದಾಪುರ: ತಾಲೂಕಿನ ಭೂತೇಶ್ವರ ಕಬ್ಬಡ್ಡಿ ಕ್ಲಬ್ ಹರಗಿ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ಗ್ರಾಮ ಒಕ್ಕಲಿಗ ಯುವ ಬಳಗ ಆಶ್ರಯದಲ್ಲಿ ಕಬ್ಬಡ್ಡಿ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಪಂದ್ಯಾವಳಿಯಲ್ಲಿ ಕಲ್ಲೂರು ತಂಡ ಪ್ರಥಮ, ಇಟಗಿ ತಂಡ ದ್ವಿತೀಯ ಹಾಗೂ ಮರಲಗಿ ತಂಡ ತೃತೀಯ ಬಹುಮಾನ ಪಡೆದುಕೊಂಡವು.
ಇದೇ ವೇಳೆಯಲ್ಲಿ ಸಿದ್ದಾಪುರ ಪಿಎಸ್‍ಐ ನಿತ್ಯಾನಂದ ಗೌಡ ಪಿ.ಡಿ. ಅವರನ್ನು ಸಂಘಟಕರು ಅಭಿನಂದಿಸಿ ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ವಿ.ಆರ್.ಗೌಡ ಹರಗಿ, ಎಂ.ಟಿ.ಗೌಡ ಕಿಲವಳ್ಳಿ, ಲಲಿತಾ ನಾಯ್ಕ ಗುಲ್ಲುಮನೆ,ರಾಮಚಂದ್ರ ನಾಯ್ಕಹರಗಿ, ರಮಾನಂದ ನಾಯ್ಕ ಹರಗಿ, ಗೋವಿಂದ ಗೌಡ ಕಿಲವಳ್ಳಿ, ಹುಲಿಯಾ ಗೌಡ ಹರಗಿ ಮತ್ತಿತರರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.