ವ್ಯಕ್ತಿ ಮೇಲೆ ದಾಳಿ ಮಾಡಿದ ಮೊಸಳೆ: ವ್ಯಕ್ತಿಗೆ ಗಂಭೀರ


ದಾಂಡೇಲಿ: ಅಯ್ಯಪ್ಪ ಸ್ವಾಮಿ ಮಾಲೆಧಾರಿ ವ್ಯಕ್ತಿಯೊಬ್ಬ ನದಿಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಒಂದೇ ಸಮನೆ ಮೊಸಳೆಯೊಂದು ದಾಳಿ ನಡೆಸಿ ಎಳೆದೊಯ್ದು ಗಾಯಗೊಳಿಸಿದ ಘಟನೆ ಉ. ಕ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ಶುಕ್ರವಾರ ಸಂಭವಿಸಿದೆ.

ದಾಂಡೇಲಿಯ ನಿರ್ಮಲ ನಗರ ನಿವಾಸಿ ನಾಗೇಶ್ ಈಶ್ವರ ಬಳ್ಳಾರಿ ಮೊಸಳೆ ಎಳೆದೊಯ್ದು ಗಾಯಗೊಳಿಸಿದ ವ್ಯಕ್ತಿ. ದಾಂಡೇಲಿಯ ಕಾಳಿನದಿ ತಟದ ಈಶ್ವರ ಮಂದಿರದ ಬಳಿ ಸ್ನಾನಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ತಕ್ಷಣ ಮಾಹಿತಿ ಪಡೆದ ಅರಣ್ಯ ಹಾಗೂ ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಬಂದು ನಾಗೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ. ಮೊಸಳೆ ದಾಳಿಯಿಂದಾಗಿ ಕಾಲು, ಕೈ ಹಾಗೂ ಮೈ ಮೇಲೆ ಗಂಭೀರ ಗಾಯಗಳಾಗಿದೆ. ಗಾಯಾಳುಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.