ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆ ಗಮನ ಸೆಳೆಯಲು ಶಾಸಕ ಹೆಬ್ಬಾರ್‌ಗೆ ಮನವಿ

ಯಲ್ಲಾಪುರ: ರಾಜ್ಯ ಶ್ರೇಷ್ಟ ನ್ಯಾಯಾಲಯದ ಆದೇಶವನ್ನು ಸರ್ಕಾರ ಪುರಸ್ಕರಿಸದೇ ಅನುದಾನಿತ ಶಾಲೆಯ ಶಿಕ್ಷಕರಿಗೆ ತೀವ್ರ ಅನ್ಯಾಯ ಮಾಡಿದೆ. ಈ ಕುರಿತು ಬೆಳಗಾವಿನಲ್ಲಿ ನಡೆಯುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಶಾಸಕ ಶಿವರಾಮ ಹೆಬ್ಬಾರರಿಗೆ ತಾಲೂಕಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಮನವಿ ಸಲ್ಲಿಸಿತು.
ಸಲ್ಲಿಸಿದ ಮನವಿಯಲ್ಲಿ ಬಸವರಾಜ ಹೊರಟ್ಟಿಯವರು ಸಚಿವರಿದ್ದಾಗ ಅನುದಾನಕ್ಕೆ ಒಳಪಡುವ ಆದೇಶ ನೀಡಿದ್ದರು. ಅದರಂತೆ ಲಕ್ಷಾಂತರ ಶಿಕ್ಷಕರಿಗೆ ಅನೇಕ ವರ್ಷಗಳ ಕಾಲ ದುಡಿದವರಿಗೆ ನ್ಯಾಯ ದೊರಕಿತ್ತು. ಆದರೆ ಅವರಿಗೆ ಪಿಂಚಣಿಯನ್ನೂ ನೀಡಿಲ್ಲ. ನೂತನ ಪಿಂಚಣಿಯ ವ್ಯವಸ್ಥೆಯನ್ನೂ ಅಳವಡಿಸಿಲ್ಲ. ಅಲ್ಲದೇ ಇಂದು ಸೇರಿದ ಶಿಕ್ಷಕರ ಸಂಬಳಕ್ಕಿಂತಲೂ ಸಂಬಳ ತೀರಾ ಕಡಿಮೆಯಿದೆ. ಈ ಕುರಿತು ಶ್ರೇಷ್ಟ ನ್ಯಾಯಾಲಯ ಆದೇಶ ಮಾಡಿದ್ದರೂ ಆದೇಶವನ್ನು ಪುರಸ್ಕರಿಸಿಲ್ಲ ಈ ಕಾರಣಕ್ಕೆ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಅನಿರ್ದಿಷ್ಟ ಅವಧಿಯವರೆಗೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ. ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಪ್ರಮುಖರಾದ ಯು.ಎಸ್. ಭಟ್ಟ,ಎಂ.ರಾಜಶೇಖರ, ಸಿ.ಎಸ್.ಚಂದ್ರಶೇಖರ, ಅಂತೋನಿ ರೋಡ್ರಿಗಿಸ್, ಪ್ರಸನ್ನ ಹೆಗಡೆ, ನವೀನಕುಮಾರ,ವಿನೋದ ಭಟ್ಟ, ಕೆ.ಸಿ.ಮಾಳ್ಕರ,ಮುಕ್ತಾಶಂಕರ, ಮಹೇಶ ನಾಯ್ಕ ಭಾಗವಹಿಸದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.