ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿಯ ಮಾರಿಕಾಂಬಾ ಗೆಳೆಯರ ಬಳಗವು ಹಿತ್ಲಳ್ಳಿಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ತಾಲೂಕು ಮಟ್ಟದ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಿಪಗೇರಿಯ ರೆಡ್ ಬ್ಯಾಕ್ಸ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
ಭರಣಿಯ ದೇಶೀ ಬಾಯ್ಸ್ ತಂಡದವರು ದ್ವಿತೀಯ ಸ್ಥಾನ ಪಡೆದರು. ತಾಲೂಕಿನ ವಿವಿಧ ಪ್ರದೇಶದ ಒಟ್ಟು 15 ತಂಡಗಳು ಪಾಲ್ಗೊಂಡಿದ್ದರು. ಈ ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ರೆಡ್ ಬ್ಯಾಕ್ಸ್ ತಂಡದ ಸಚಿನ್ ಸರ್ವೋತ್ತಮ ಆಟಗಾರನಾಗಿ ಉತ್ತಮ ಬೌಲರ್ ಆಗಿ ದೇಶೀ ತಂಡದ ಮಹೇಂದ್ರ ಉತ್ತಮ ಬ್ಯಾಟ್ಸ್ಮನ್ ಆಗಿ ಉಮ್ಮಚಗಿಯ ಡ್ರೀಮ್ ಇಲೆವೆನ್ ತಂಡದ ಪ್ರಸನ್ನ ಆಯ್ಕೆಗೊಂಡು ಪ್ರಶಸ್ತಿ ಪಡೆದರು.