ಗೋಕರ್ಣದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಉಪವಿಧಿ ಜಾರಿಗೆ


ಗೋಕರ್ಣ: ಎಲ್ಲೆಂದರಲ್ಲಿ ಕಸ ಕಡ್ಡಿಗಳು, ಪ್ಲಾಸ್ಟಿಕ ತ್ಯಾಜ್ಯಗಳ ರಾಶಿ ಬೀಳುತ್ತಿರುವ ಪುರಾಣ ಪ್ರಸಿದ್ದ ಕ್ಷೇತ್ರವನ್ನು ಸ್ವಚ್ಛ ಗೋಕರ್ಣವನ್ನಾಗಿ ಮಾಡಲು ಪಣ ತೊಟ್ಟಿರುವ ಇಲ್ಲಿನ ಗ್ರಾಮ ಪಂಚಾಯತ ಘನ ತ್ಯಾಜ್ಯ ನಿರ್ವಹಣೆ ಸಲುವಾಗಿ ಉಪವಿಧಿ ಜಾರಿಗೆ ತಂದಿದ್ದು, ಇದರಂತೆ ಘನತ್ಯಾಜ್ಯ ವಿಲೇವಾರಿ ಸಮಿತಿ ರಚಿಸಿದೆ.
ಇದರ ಪ್ರಥಮ ಸಭೆ ಇಲ್ಲಿನ ಗ್ರಾಂ. ಪಂ. ಸಭಾಭವನದಲ್ಲಿ ಶುಕ್ರವಾರ ಜರುಗಿತು. ಬಹುಮುಖ್ಯವಾಗಿ ಎಲ್ಲೆಡೆ ಪ್ಲಾಸ್ಟಿಕ ತ್ಯಾಜ್ಯಗಳು ಹೆಚ್ಚುತ್ತಿರುವುದರಿಂದ ಬರುವ ಜ. 1ರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಕ್ಕೆ ಸಭೆ ನಿರ್ಣಯಿಸಿತು. ಸದ್ಯಲ್ಲೆ ಸಮತಿಯ ಎಲ್ಲಾ ಸದಸ್ಯರನು ಒಳಗೊಂಡ ತಂಡ ಪ್ರತಿ ಅಂಗಡಿ, ಮನೆಗಳಿ ತೆರಳಿ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಎರಡನೆ ಹಂತದಲ್ಲಿ ಪ್ರತಿ ಮನೆಗಳಿಗೆ ಕರಪತ್ರ ವಿತರಿಸಲು ನಿರ್ಧರಿಸಲಾಯಿತು.

ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡುವವರಿಗೆ ದಂಡ ವಿಧಿಸಲು ಸಭೆ ಸಮ್ಮತಿಸಿತು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಲು ಕೆಲ ಸಂಘ ಸಂಸ್ಥೆಗಳು ಮತ್ತು ವಸತಿ ಗೃಹಗಳಿಗೆ ಅಳವಡಿಸಿರುವ ಸಿ.ಸಿ.ಕ್ಯಾಮರವನ್ನು ಬಳಸಿಕೊಳ್ಳಲು ನಿರ್ಣಹಿಸಿದ್ದಾರೆ. ಸಭೆ ಅಧ್ಯಕ್ಷತೆಯನ್ನು ತಾಂ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ ವಹಿಸಿದ್ದರು. ಗ್ರಾಂ. ಪಂ. ಅಧ್ಯಕ್ಷೆ ಮಹಾಲಕ್ಷ್ಮೀ ಭಡ್ತಿ, ಉಪಾಧ್ಯಕ್ಷ ಶೇಖರ ನಾಯ್ಕ,ಜಿ.ಪಂ.ಸದಸ್ಯಸೆ ಗಾಯತ್ರಿ ಗೌಡ ,ತಾಂ .ಪಂ. ಸದಸ್ಯ ಮಹೇಶ ಶೆಟ್ಟಿಗ್ರಾಂ. ಪಂ. ಅಭಿವೃದ್ದಿ ಅಧಿಕಾರಿ ಯಾದವ ನಾಯ್ಕ, ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಕಂದಾಯ ಇಲಾಖೆ ಅಧಿಕಾರಿ ಪೂಲೀಸ ಅಧಿಕಾರಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.