ವಿ.ಉಮಾಕಾಂತ ಭಟ್ಟರಿಗೆ ಕಲಾಶಾಸ್ತ್ರಸಾಹಿತ್ಯ ವಾರಿಧಿ ಬಿರುದು ಪ್ರದಾನ


ಶಿರಸಿ: ಸಂಸ್ಕೃತ ಕನ್ನಡ ಭಾಷಾ ವಿದ್ವಾಂಸ, ತಾಳಮದ್ದಲೆ ಖ್ಯಾತ ಅರ್ಥದಾರಿ, ಮೇಲುಕೋಟೆ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಚಾರ್ಯ ವಿ. ಕೆರೇಕೈ ಉಮಾಕಾಂತ ಭಟ್ಟ ಅವರಿಗೆ ಕಾಸರಗೋಡಿನ ಎಡನೀರು ಮಠದಿಂದ `ಕಲಾಶಾಸ್ತ್ರಸಾಹಿತ್ಯ ವಾರಿಧಿ’  ಬಿರುದು ನೀಡಿ ಸಮ್ಮಾನಿಸಲಾಯಿತು.
ಮಠದ ಶ್ರೀ ಈಶ್ವರಾನಂದಭಾರತೀ ಸ್ವಾಮೀಜಿಗಳ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಮಠಾಧೀಶ ಶ್ರೀಕೇಶವಾನಂದ ಭಾರತೀ ಸ್ವಾಮೀಜಿಗಳು  `ಕಲಾಶಾಸ್ತ್ರಸಾಹಿತ್ಯ ವಾರಿಧಿ ಬಿರುದು ನೀಡಿ ಸಮ್ಮಾನಿಸಿ ಗೌರವಿಸಿದರು. ಈ ವೇಳೆ ಪ್ರಮುಖರಾದ ಹರಿಕೃಷ್ಣ ಪುನರೂರು, ಲಕ್ಷ್ಮೀನಾರಾಯಣ ಆಸ್ರಣ್ಣ, ಕಿರಿಂಗಾರು ಗೋಪಾಲಕೃಷ್ಣ ಭಟ್ಟ, ಹಿರಣ್ಯ ವೆಂಕಟೇಶ ಭಟ್ಟ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.