ಸುವಿಚಾರ

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಮ್
ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ ||

ಅಂಗೈಯ ಬೊಗಸೆ ಮಾಡಿ ಅದರಲ್ಲಿ ಸುಗಂಧಿತ ಪುಷ್ಪಗಳನ್ನು ತುಂಬಿಕೊಂಡಾಗ ನಮ್ಮೆರಡು ಅಂಗೈಗಳೂ ಪರಿಮಳಯುಕ್ತವಾಗುತ್ತವೆ. ಬಲ ಮತ್ತು ಎಡ ಎಂಬೆರಡು ಎಡೆಗಳಲ್ಲೂ ಹೂವುಗಳ ಪ್ರೀತಿ ಒಂದೇ ತೆರನಾದ್ದು, ಅದಕ್ಕೆ ಭೇದವಿಲ್ಲ. ಸುಮನಸಾಂ ಎಂಬ ಪದವಿಲ್ಲಿ ಹೂವುಗಳ ಮತ್ತು ಸಜ್ಜನರ (ಒಳ್ಳೆ ಮನಸುಳ್ಳವರ) ಎಂಬರ್ಥದಲ್ಲಿ ಪ್ರಯುಕ್ತವಾಗಿದೆ. ಸಜ್ಜನರ ಪ್ರೀತಿಯೂ ಹಾಗೇನೆ, ಅದು ಎಲ್ಲೆಡೆಗಳಲ್ಲೂ ಸಮಾನವಾಗಿ ಹಂಚಲ್ಪಡುತ್ತದೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.