ವಿದ್ಯಾರ್ಥಿಗಳು ಆತ್ಮ ರಕ್ಷಣೆಗೆ ಕರಾಟೆ ಕಲಿತುಕೊಳ್ಳಬೇಕು; ಪಿಎಸ್‍ಐ ಸುಧಾ ಟಿ

ಕುಮಟಾ: ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರತಿಯೊಬ್ಬರೂ ಆತ್ಮರಕ್ಷಣೆ ಕಲೆಯನ್ನು ಕರಗತ ಮಾಡಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪಿಎಸ್‍ಐ ಸುಧಾ ಟಿ. ಹರಿಕಂತ್ರ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಕುಮಟಾ ಘಟಕದ ವತಿಯಿಂದ ಇಲ್ಲಿನ ನೆಲ್ಲಿಕೇರಿ ಶಾಸಕರ ಮಾದರಿ ಶಾಲೆಯಲ್ಲಿ ಆಯೋಜಿಸಿದ ಮಿಷನ್ ಸಾಹಸಿ ಕರಾಟೆ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಲತಾ ಎನ್. ನಾಯ್ಕ ಮಹಿಳಾ ಸಬಲೀಕರಣದ ಬಗ್ಗೆ ವಿವರಣಾತ್ಮಕವಾಗಿ ಮಾಹಿತಿ ನೀಡಿದರು. ಕರಾಟೆ ಶಿಕ್ಷಕ ಎಸ್.ಪಿ.ಹಂದೆ ವಿದ್ಯಾರ್ಥಿಗಳಿಗೆ ಕರಾಟೆಯ ಬಗೆಗೆ ಮಾರ್ಗದರ್ಶನ ನೀಡಿದರು.
ಬೆಣ್ಣೆ ಪಿಯು ಕಾಲೇಜಿನ ಪ್ರಾಚಾರ್ಯ ಸತೀಷ ಬಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗಣೇಶ ನಾಯ್ಕ ಸ್ವಾಗತಿಸಿದರು. ಅನಿತಾ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಹ ಸಂಚಾಲಕ ಸಂದೇಶ ನಾಯ್ಕ, ಕುಮಟಾ ನಗರ ಕಾರ್ಯದರ್ಶಿ ಯೋಗೇಶ ನಾಯ್ಕ, ಶಿರಸಿ ವಿಭಾಗ ಸಹಸಂಚಾಲಕ ಕಾರ್ತಿಕ ನಾಯ್ಕ, ನಗರ ವಿದ್ಯಾರ್ಥಿನಿ ಪ್ರಮುಖೆ ಅನಿತಾ ನಾಯ್ಕ, ಕಾರ್ಯಕರ್ತರಾದ ಅಕ್ಷಯ ನಾಯಕ, ಗಣೇಶ ನಾಯ್ಕ, ಮಣಿಕಂಠ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.