ಯೋಗ ದೇಹ ಮತ್ತು ಮನಸ್ಸು ಸುಸ್ತಿತಿಯಲ್ಲಿಡಲು ಉತ್ತಮ ಮಾರ್ಗ; ಧರ್ಮರಾಜ


ಕುಮಟಾ: ಯೋಗವು ದೇಹ ಮತ್ತು ಮನಸ್ಸನ್ನು ಸುಸ್ತಿತಿಯಲ್ಲಿಡಲು ಅತ್ಯುತ್ತಮ ಮಾರ್ಗವಾಗಿದೆ. ಮಕ್ಕಳ ಕಲಿಕಾ ಸಾಮಥ್ರ್ಯವನ್ನು ವೃದ್ಧಿಸುವಲ್ಲಿಯೂ ಕೂಡ ಯೋಗ ನೆರವಿಗೆ ಬರುತ್ತದೆ ಎಂದು ಪತಂಜಲಿ ಯೋಗ ಸಮಿತಿಯ ಸಂಚಾಲಕ ಧರ್ಮರಾಜ ರೇವಣಕರ ಅಭಿಪ್ರಾಯ ಪಟ್ಟರು.
ಇಲ್ಲಿನ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶಾಲಾವಧಿಯ ನಂತರ ಏರ್ಪಡಿಸಲಾಗಿದ್ದ ಒಂದು ವಾರಗಳ ಕಾಲದ ಪತಂಜಲಿ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೋಗವು ಮಕ್ಕಳ ಅಧ್ಯಯನದ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುವುದು ಎಂಬ ಉದ್ದೇಶದಿಂದ ಮಕ್ಕಳಿಗೆ ಯೋಗ ತರಬೇತಿಯಲ್ಲಿ ಪಾಲ್ಗೊಳ್ಳಲು ತಾವು ಅನುಮತಿಸಲು ಸಂತೋಷಿಸಿದ್ದೇನೆಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ತಿಳಿಸಿದರು. ನಂತರ ಯೋಗಗುರು ಕೆ.ಜಿ.ಭಟ್ಟ ಮಾತನಾಡಿದರು.
ಶಿವಾನಂದ ಶೇಟ್, ಶಾಲೆಯ ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗ ಅಭ್ಯಾಸ ನಿರತರಿಗೆ ನೆರವಾದರು. ಪ್ರಾಣಾಯಾಮ, ಸೂರ್ಯನಮಸ್ಕಾರ, ಮೌನಧ್ಯಾನ ಮೊದಲಾದ ಪ್ರಮುಖ ಪ್ರಕಾರಗಳ ಜೊತೆಗೆ ವಿವಿಧ ಆಸನಗಳನ್ನು ಪರಿಚಯಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಯೋಗಶಿಕ್ಷಕರಿಗೆ ಸನ್ಮಾನಿಸಲಾಯಿತು. ರಕ್ಷಿತಾ ಪಟಗಾರ, ಲಕ್ಷ್ಮೀಧರ ಗೌಡ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ವಿಷ್ಣು ಭಟ್ಟ ಸ್ವಾಗತಿಸಿದರು. ಶಿಕ್ಷಕ ಎಸ್.ಪಿ.ಪೈ, ಕಿರಣ ಪ್ರಭು ಸಹಕರಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.