ಬೊಪ್ಪನಳ್ಳಿಯಲ್ಲಿ ಶೈಕ್ಷಣಿಕ ಕಾರ್ಯಾಗಾರ ಸಂಪನ್ನ

ಶಿರಸಿ: ತಾಲೂಕಿನ ಸ.ಹಿ.ಪ್ರಾ.ಶಾಲೆ ಬೊಪ್ಪನಳ್ಳಿಯಲ್ಲಿ ಬುಧವಾರ “ಶೈಕ್ಷಣಿಕ ಕಾರ್ಯಾಗಾರ” ನಡೆಯಿತು.

ಎಸ್.ಡಿ.ಎಂ.ಸಿ ಹಾಗೂ ಹಳೆ ವಿದ್ಯಾರ್ಥಿಗಳ ಸಹಯೋಗದಿಂದ ನಡೆದ ಈ ಕಾರ್ಯಕ್ರಮದಲ್ಲಿ ಗದ್ದೆ ಕೃಷಿ ಕುರಿತು ಕೆ.ಎನ್.ಹೆಗಡೆ, ತೋಟದ ಬೆಳೆ ಕುರಿತು ಎನ್.ಎಸ್.ಹೆಗಡೆ, ಗಾರೆ ಕೆಲಸದ ಬಗ್ಗೆ ವಿ.ಆರ್. ಮಡಿವಾಳ, ಮರದಿಂದ ವಸ್ತು ತಯಾರಿಕೆ ಬಗ್ಗೆ ಜಿ.ಎಸ್.ಭಟ್ಟ, ಔಷಧಿ ಸಸ್ಯಗಳ ಕುರಿತು ವಿ.ಪಿ.ಹೆಗಡೆ, ಗೊಬ್ಬರ ತಯಾರಿಕೆ ಬಗ್ಗೆ ಎಸ್.ಎನ್.ಹೆಗಡೆ. ಕಸಿ ಕಟ್ಟುವುದರ ಕುರಿತಾಗಿ ಎಸ್.ವಿ.ಭಟ್ಟ, ನಿತ್ಯ ಜೀವನದಲ್ಲಿ ವಿಜ್ಞಾನದ ಕುರಿತಾಗಿ ಚಿದಾನಂದ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ಶ್ರೀಪಾದ.ಎನ್.ಹೆಗಡೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಕಲ್ಪನಾ.ಹೆಗಡೆ ಸ್ವಾಗತಿಸಿ ವಂದಿಸಿದರು. ಲೀಲಾವತಿ ಪಟಗಾರ ನಿರ್ವಹಿಸಿದರು.

Categories: ಚಿತ್ರ ಸುದ್ದಿ

Leave A Reply

Your email address will not be published.