ಡಿ.13ಕ್ಕೆ ಬಾಳಿಗಾ ಕಾಲೇಜಿನಲ್ಲಿ ವಿಪ್ರೋ ಸಂಸ್ಥೆ ಕ್ಯಾಂಪಸ್ ಸಂದರ್ಶನ

ಕುಮಟಾ: ಮಾಹಿತಿ ತಂತ್ರಜ್ಞಾನದಲ್ಲಿ ಅಗ್ರಮಾನ್ಯವಾದ ವಿಪ್ರೋ ಸಂಸ್ಥೆಯ ಕ್ಯಾಂಪಸ್ ಸಂದರ್ಶನವನ್ನು ಡಿ. 13 ರಂದು ಇಲ್ಲಿನ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಕೆನರಾ ಸೊಸೈಟಿಯ ಅಧ್ಯಕ್ಷ ಮುರಳೀಧರ ವಾಯ್. ಪ್ರಭು ತಿಳಿಸಿದರು.

ಗುರುವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಮಹಾವಿದ್ಯಾಲಯಗಳ ಬಿ.ಎಸ್.ಸಿ ಹಾಗೂ ಬಿ.ಸಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಐಚ್ಚಿಕ ವಿಷಯವಾಗಿ ಗಣಿತ ಕಡ್ಡಾಯವಾಗಿರಬೇಕು. ಈಗಾಗಲೇ ಜಿಲ್ಲೆಯ 13 ಮಹಾವಿದ್ಯಾಲಯಗಳಿಗೆ ಈ ಕುರಿತು ಮಾಹಿತಿ ಕಳುಹಿಸಲಾಗಿದೆ. ಇಂತಹ ಸುರ್ಣಾವಕಾಶವನ್ನು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ನಂತರ ಪ್ರಾಚಾರ್ಯ ಉಮೇಶ ಜಿ. ಶಾಸ್ತ್ರಿ ಮಾತನಾಡಿ, ಈ ಕ್ಯಾಂಪಸ್‍ನಲ್ಲಿ ಆಯ್ಕೆಯಾದ ವಿದ್ಯಾಥಿಗಳಿಗೆ ವಿಪ್ರೋ ಸಂಸ್ಥೆಯ ವತಿಯಿಂದ ಎಂ ಟೆಕ್ ಹಾಗೂ ಎಂ ಎಸ್ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಿದೆ. ಆಯ್ಕೆಯಾದವರು 60 ತಿಂಗಳ ಸೇವಾ ಕರಾರಿಗೆ ಸಹಿಮಾಡಬೇಕಾಗುತ್ತದೆ. ವಿಪ್ರೋ ಕಂಪನಿಯವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊದಲನೇ ವರ್ಷ 15,712 ರೂ, ಎರಡನೇ ವರ್ಷ 17,810 ರೂ, ಮೂರನೇ ವರ್ಷ 19,910 ಹಾಗೂ ನಾಲ್ಕನೇ ವರ್ಷ 23,000 ರೂ.ಗಳಂತೆ ಪ್ರತಿ ತಿಂಗಳು ಸ್ಟೈಪೆಂಡ್ ನೀಡುತ್ತಾರೆ. ಸಂದರ್ಶನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕೆಲವು ಅರ್ಹತಾ ನಿಯಮಗಳಿವೆ. ಇಂತಹ ಅರ್ಹತೆಯನ್ನು ಪಡೆದ ವಿದ್ಯಾರ್ಥಿಗಳು ಕನಿಷ್ಠ ಎರಡು ದಿನ ಮುಂಚಿತವಾಗಿ ಅಂದರೆ ಡಿ.10 ರೊಳಗಾಗಿ ತಮ್ಮ ನೋಂದಣಿ ಪ್ರಕ್ರಿಯೆ ಪೂರೈಸಿಕೊಳ್ಳಬೇಕು. ಆನ್ ಲೈನ್ ರೆಜಿಸ್ಟ್ರೇಶನ್ ಕಡ್ಡಾಯವಾಗಿದ್ದು, ಸ್ಥಳದಲ್ಲೇ ನೋಂದಣಿಗೆ ಅವಕಾಶಗಳಿರುವದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಜಿಲ್ಲೆಯ ಎಲ್ಲಾ ಮಹಾವಿದ್ಯಾಲಯಗಳ ಪ್ರಾಚಾರ್ಯರನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದಾಗಿದೆ. ಅಥವಾ ಎಸ್ ವಿ ಗಾಂವಕರ್ (9448906567) ಮತ್ತು ಪ್ರಕಾಶ ಪಂಡಿತ್ (9448408663) ಇವರನ್ನು ಸಂಪರ್ಕಿಸಬಹುದು ಹಾಗೂ ಆನ್‍ಲೈನ್ ರೆಜಿಸ್ಟ್ರೇಶನ್‍ಗಾಗಿ https://synergy.wipro.com/campus/lgn?opr=cdr&erentld=fRwV3qlMuPc=O ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ಈ ಸಂದರ್ಶನದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿನಂತಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖ ವಿನೋದ ಪ್ರಭು, ವಿ.ಪಿ ಶಾನಭಾಗ ಹಾಗೂ ಎಸ್.ವಿ ಗಾಂವಕರ, ಎಂ.ಜಿ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಫೋಟೋ: {6 ಕೆಎಮ್‍ಟಿ 01} ಕೆನರಾ ಕಾಲೇಜ್ ಸೊಸೈಟಿಯ ಅಧ್ಯಕ್ಷ ಮುರಲೀಧರ ಪ್ರಭು ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿರುವುದು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.