ಗೋಕರ್ಣದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ; ಚರಂಡಿಯಲ್ಲಿ ನಿಂತ ನೀರು


ಗೋಕರ್ಣ: ಮೋಜು ಮಸ್ತಿ ತಾಣವಾಗಿ ಗೋಕರ್ಣ ಬದಲಾಗುತ್ತಿದೆ. ಇದರ ಪರಿಣಾಮ ಕಂಡ- ಕಂಡಲ್ಲಿ ವಸತಿ ಗೃಹಗಳು ಹೆಚ್ಚುತ್ತಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ ತ್ಯಾಜ್ಯಗಳ ರಾಶಿ ಜೊತೆಯಲ್ಲಿ ವಸತಿ ಗೃಹಗಳಿಂದ ಬಿಡುವ ಹೊಲಸು ನೀರು ಚರಂಡಿಯಲ್ಲಿ ನಿಂತು ಗಬ್ಬು ವಾಸನೆ ಬರುತ್ತಿದೆ.
ಪುರಾಣ ಪ್ರಸಿದ್ದ ಇಲ್ಲಿನ ಮಹಾಬಲೇಶ್ವರ ಕ್ಷೇತ್ರ ಕಾಶಿಗಿಂತ ಮೇಲು ಎಂಬ ಪ್ರತೀತಿ ಇದೆ. ಇಲ್ಲಿ ಆತ್ಮಲಿಂಗಕ್ಕೆ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವುದರಿಂದ ಪಾಪ ತೊಳೆದು ಪುಣ್ಯ ಪ್ರಾಪ್ತಿ ಎನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಗೋಕರ್ಣ ಮಲೀನ ಮುಕ್ತಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ ತ್ಯಾಜ್ಯಗಳು, ಹೊಲಸು ನೀರು ಹರಿಯುತ್ತಿದೆ ಇದರಿಂದ ರೋಗರುಜಿನಗಳ ತಾಣವಾಗುತ್ತಿದೆ. ಸ್ವಚ್ಛ ಗೋಕರ್ಣಕ್ಕೆ ಪಣ ತೊಟ್ಟಿರುವ ಇಲ್ಲಿನ ಗ್ರಾಮ ಪಂಚಾಯತ ಘನತ್ಯಾಜ್ಯ ವಿಲೇವಾರಿಗೆ ಉಪವಿಧಿ ಜಾರಿ ಮಾಡಿದ್ದು, ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ 15 ಜನರ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಪ್ರಥಮ ಸಭೆ ಡಿ.7ರ ಶುಕ್ರವಾರ ನಡೆಯಲಿದೆ. ಇದು ಸ್ಥಳೀಯರಿಗೆ ಹೊಸ ಆಶಾಭಾವನೆ ಮೂಡಿಸಿದೆ. ಈ ಸಮಿತಿಯಲ್ಲಿ ಗ್ರಾಂ. ಪಂ. ಅಧ್ಯಕ್ಷ, ಉಪಾಧ್ಯಕ್ಷ, ಮೂರು ಸದಸ್ಯರು ಮತ್ತು ವಿವಿಧ ಸಾರ್ವಜನಿಕ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯನಿರ್ವಹಿಸಲಿದ್ದಾರೆ. ಇನ್ನಾದರೂ ಸ್ವಚ್ಚ ಗೋಕರ್ಣವಾಗಲಿ ಎಂದು ಸಾರ್ವಜನಿಕರ ಕಾದು ನೋಡುತ್ತಿದ್ದಾರೆ.
ಸ್ವಚ್ಛತೆಗೆ ಪಣತೊಟ್ಟವರು: ಗ್ರಾಮ ಪಂಚಾಯತ ಸ್ವಚ್ಛತಾ ಅಭಿಯಾನಕ್ಕೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಜೊತೆಗೊಡಿದೆ. ಇಲ್ಲಿನ ವೈದ್ಯಾಧಿಕಾರಿ ಜಗದೀಶ ನಾಯ್ಕ ವಿಶೇಷ ಆಸಕ್ತಿವಹಿಸಿದ್ದು, ಅಸ್ವಚ್ಛತೆಯಿಂದ ಸ್ಥಳೀಯ ನಿವಾಸಿಗಳಿಗೆ ಹರಡುತ್ತಿರುವ ಕಾಯಿಲೆಗಳ ಬಗ್ಗೆ ಸಂಪೂರ್ಣ ವಿವರ ಸಲ್ಲಿಸಿದ್ದಾರೆ. ಸ್ವತಃ ತಾವೇ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಜೊತೆಗೆ ಲಯನ್ಸ ಕ್ಲಬ್ ಪದಾಧಿಕಾರಿ ಹಾಗೂ ಭದ್ರಕಾಳಿ ಕಾಲೇಜಿನ ಎನ್. ಸಿ.ಸಿ. ಕಮಾಂಡರ ಪ್ರೋಫೆಸರ ಎನ್. ಎಸ್. ಲಮಾಣಿಯವರು ಈಗಾಗಲೇ ಎನ್. ಸಿ.ಸಿ.ವಿದ್ಯಾರ್ಥಿಗಳಿಂದ ಸ್ವಚ್ಛತಾ ಜಾಥಾ ನಡೆಸಿ ಪ್ರತಿ ಅಂಗಡಿ, ಮನೆಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ.ಇವರ ಜೊತೆ ಸ್ಥಳೀಯರು ಸ್ವಚ್ಛತ ಆಂದೋಲನಕ್ಕೆ ಕೈಜೋಡಿಸಿ ಸಹಕರಿಸಿದರೆ ಇವರ ಇವರ ಪ್ರಯತ್ನಕ್ಕೊಂದು ಗೌರವಸಲ್ಲಿಸುವುದರ ಜೊತೆಗೆ ನಮ್ಮ ಊರು ಸ್ವಚ್ಚ ಊರವನ್ನಾಗಿ ಮಾಡಬಹುದು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.