ಕೆಡಿಪಿ ಸಭೆಯಲ್ಲಿ ವಿವಿಧ ಸಮಸ್ಯೆ ಕುರಿತು ಚರ್ಚೆ; ಗರ್ಭಿಣಿ ಸ್ತ್ರೀಗೆ 6000 ಆರ್ಥಿಕ ಸಹಾಯ


ಕಾರವಾರ: ಮಾತೃಶ್ರೀ ಯೋಜನೆ ಜಾರಿಗೆ ಬಂದ ಹಿನ್ನಲೆಯಲ್ಲಿ, ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗರ್ಭಿಣಿ ಸ್ತ್ರೀಯರಿಗೆ 3000 ರೂ. ಹಾಗೂ ಮಗು ಜನನವಾದ ಬಳಿಕ 3000 ರೂ. ಸೇರಿದಂತೆ ಒಟ್ಟು 6000 ರೂ. ಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಎಂದು ತಾಪಂ ಕೆಡಿಪಿ ಸಭೆಯಲಿ ಚರ್ಚೆ ನಡೆಯಿತು.
ಕಳೆದ ತಿಂಗಳಿನಿಂದ ಜಾರಿಗೆ ಬಂದಿದ ಮಾತೃಶ್ರೀ ಯೋಜನೆಯಡಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಬಂದಿದೆ, ಈ ಯೋಜನೆ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಅನ್ವಯವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
ಕೆರವಡಿಯ ಬಹುಗ್ರಾಮ ಯೋಜನೆಯಡಿಯಲ್ಲಿ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂಬ ಆರೋಪವಿದೆ. ಎಲ್ಲೆಡೆ ವಾಲ್ವ್ ಅಳವಡಿಸಿದ್ದರೆ ಈ ರೀತಿ ಸಮಸ್ಯೆ ಆಗಹುತ್ತಿರಲಿಲ್ಲ. ಮನೆಗೆ ನಳ ಸಂಪರ್ಕ ಮಾಡುವಾಗಲೂ ಸಹ ವಾಲ್ವ್ ಅಳವಡಿಸಲಾಗುತ್ತದೆ. ಅತಿ ದೊಡ್ಡ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಲು ವಾಲ್ವ್ ಅಳವಡಿಸಬೇಕು ಎಂಬ ಮಾಹಿತಿ ಇರಲಿಲ್ಲವೇ? ನೀರು ಸಮರ್ಪಕವಾಗಿ ಪೂರೈಸಲು ಇಲಾಖೆ ಏನು ಕ್ರಮ ಕೈಗೊಂಡಿದೆ? ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕಿಯಿಸಿದ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿ, ಕೆರವಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ವಾಲ್ವ್ ಅಳವಡಿಕೆ ಬಗ್ಗೆ ಯೋಜನೆಯಲ್ಲಿ ಉಲ್ಲೇಖ ಇರಲಿಲ್ಲ. ಈಗ ಪ್ರತ್ಯೇಕವಾಗಿ ವಾಲ್ವ್ ಅಳವಡಿಸಲು ಅನುದಾನದ ಕೊರತೆ ಆಗಿದೆ. ಸೂಕ್ತ ಅನುದಾನ ಲಭ್ಯತೆಗೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಡಲೇ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟಿದರು.
ಸಭೆಯಲ್ಲಿ ಕೆಲ ಸದಸ್ಯರು ತಮ್ಮ ಭಾಗದ ಹಲವಾರು ಸಮಸ್ಯೆಗಳನ್ನು ಹೇಳಿಕೊಂಡಿರುತ್ತಾರೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿರುವ ಬಗ್ಗೆ ಅನುಪಾಲನಾ ವರದಿ ನೀಡುವಲ್ಲಿ ವಿಳಂಬವಾಗುತ್ತದೆ. ಇಲಾಖಾ ಅಧಿಕಾರಿಗಳು ಅನುಪಾಲನಾ ವರದಿಯನ್ನು ಬೇಗ ಕೊಟ್ಟಲ್ಲಿ ಸದಸ್ಯರಿಗೂ ತೃಪ್ತಿ ಇರುತ್ತದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಸೂಚಿಸಿದರು.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಕೆಲ ಸಿಬ್ಬಂದಿಗಳಿಗೆ ಸಂಬಳ ಆಗಿಲ್ಲ. ಇಲಾಖೆಯಲ್ಲಿ ಅನುದಾನ ಕೊರತೆ ಇದೆ. ಅನುದಾನ ಲಭ್ಯವಾದ ತಕ್ಷಣ ವೇತನ ನೀಡಲಾಗುತ್ತದೆ ಎಂದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಉಪಾಧ್ಯಕ್ಷ ರವೀಂದ್ರ ಪವಾರ್ ಹಾಗೂ ಇನ್ನಿತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.