ಕುಮಾರ ಮಾರ್ಕಾಂಡೆ ವಿರುದ್ಧ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ತಾರಾ ಗೌಡ ಆರೋಪ


ಕುಮಟಾ: ಇತ್ತೀಚಿಗೆ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ತಾರಾ ಗೌಡ ಸುದ್ದಿಗೋಷ್ಠಿ ನಡೆಸಿ, ವಿನಾಯಕ ಭಟ್ ಸಂತೆಗುಳಿ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ ವಿರುದ್ಧ ಆರೋಪಿಸಿದ್ದರು. ಅವರ ಹೇಳಿಕೆಗೆ ವಿನಾಯಕ ಭಟ್ ಸಂತೆಗುಳಿ ಪ್ರತಿಕ್ರಿಯಿಸಿದ್ದಾರೆ.

ತಾರಾ ಗೌಡ ಕಾಂಗ್ರೇಸ್ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ವಿನು ಜಾರ್ಜ್, ಕಿಟ್ಟಿ ನಾಯ್ಕ, ಮುಂತಾದವರೆಲ್ಲಾ ಕಾಂಗ್ರೇಸ್ ಕಾರ್ಯಕರ್ತರಾಗಿ ಸಂತೆಗುಳಿಗೆ ನಾವುಗಳೂ ಹೋಗಿದ್ದೇವು ಎಂದು ಹೇಳುವ ನೈತಿಕತೆಯೂ ಇವರಲ್ಲಿ ಇಲ್ಲವೇ? ಅದನ್ನು ಹೊರತು ಪಡಿಸಿ ಸಾಮಾಜಿಕ ಕಾರ್ಯಕರ್ತೆ ಎನ್ನುವ ಮುಖವಾಡ ಧರಿಸಿ ಸಂತೆಗುಳಿಗೆ ಹೋಗಿ, ಬಹಳ ವರ್ಷಗಳಿಂದ ಒತ್ತುವರಿ ಮಾಡಿ ಬೆಳೆಸಿದ ಗಿಡಮರಗಳನ್ನು ನಾಶಪಡಿಸಿ, ಕಟ್ಟಿದ ಬೇಲಿ ಕಿತ್ತೊಗೆದು ಅದೇ ಸ್ಥಳದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲು ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಲ್ಲದೇ, ತಪ್ಪು ಮಾಹಿತಿ ನೀಡಿ, ಅಧಿಕಾರಿಗಳನ್ನು ಸಹ ಸ್ಥಳಕ್ಕೆ ಕರೆಯಿಸುವುದು ಸಾಮಾಜಿಕ ಕಾರ್ಯಕರ್ತರ ಪ್ರಾಮಾಣಿಕ ಕೆಲಸವೇ? ಸಾಮಾಜಿಕ ಕಾರ್ಯಕರ್ತೆಯಾಗಿ ಸಾರ್ವಜನಿಕ ಸಮಸ್ಯೆಗಳಿಗೆ ನ್ಯಾಯ ಕೊಡಿಸಬೇಕೆಂಬ ಪ್ರಾಮಾಣಿಕ ಕಾಳಜಿ ಇವರಲ್ಲಿದ್ದರೆ ಕಾಂಗ್ರೇಸ್ ಮಹಿಳಾಧ್ಯಕ್ಷೆ ಸ್ಥಾನಕ್ಕೆ ರಾಜಿನಾಮೆ ಕೊಡಲಿ. ಸಂತೆಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳೀಯರಾಗಿ ನಾವೆಲ್ಲಾ ನಿರ್ಧರಿಸಿದ್ದೇವೆ. ಕುಮಟಾದಿಂದ ಸಾಮಾಜಿಕ ಕಾರ್ಯಕರ್ತರ ಸೋಗಿನಲ್ಲಿ ಇವರು ಬರುವ ಅವಶ್ಯಕತೆಯಿರಲಿಲ್ಲ. ಸಖಿನಾ ಸಾಬ್ ಇವರ ಮನೆಯ 40-50 ಮೀಟರ್ ಅಂತರದಲ್ಲಿ ಡಾಂಬರ್ ರಸ್ತೆ ಇರುವುದನ್ನು ಇವರು ಯಾಕೆ ಮುಚ್ಚಿಡುತ್ತಿದ್ದಾರೆ? ಹಾಗಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ಅರಣ್ಯ ಇಲಾಖೆಯ ಸ್ಥಳವನ್ನು ಒತ್ತುವರಿ ಮಾಡೇ ಇಲ್ಲವೇ?

ಇನ್ನು ಕೇಂದ್ರ ಸಚಿವ ಹಾಗೂ ಲೋಕಸಭಾ ಸದಸ್ಯರಾದ ಅನಂತ ಕುಮಾರ್ ಹೆಗಡೆಯವರು ಹಾಗೂ ಶಾಸಕ ದಿನಕರ ಶೆಟ್ಟಿಯವರ ಹೆಸರನ್ನು ಹೇಳುವ, ಟೀಕಿಸುವ ಯೋಗ್ಯತೆ ಇವರಿಗಿಲ್ಲ. ಅದನ್ನು ಬಿಜೆಪಿ ಕಾರ್ಯಕರ್ತರು ಸಹಿಸುವುದಿಲ್ಲ. ಅನಂತ ಕುಮಾರ್ ಹೆಗಡೆಯಾಗಲಿ ಬಿಜೆಪಿಯವರಾಗಲಿ ಮುಸ್ಲಿಂ ವಿರೋಧಿಗಳಲ್ಲ. ಬದಲಿಗೆ ದೇಶದ್ರೋಹಿ ಮುಸ್ಲಿಂ ಮತಗಳು ಬೇಡ ಎಂದಿರುವುದು ನಿಜ. ಅಬ್ದುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಗಳನ್ನು ಮತ್ತು ದೇಶಪ್ರೇಮಿ ಮುಸ್ಲಿಂರನ್ನು ಬಿಜೆಪಿ ಸದಾ ಗೌರವಿಸುತ್ತದೆ. ನಿಮ್ಮ ಕಾಂಗ್ರೆಸ್ ಪಕ್ಷದವರ ಹಾಗೆ ಮುಸ್ಲಿಂರನ್ನು ಕತ್ತಲೆಯಲ್ಲಿಟ್ಟು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಿಲ್ಲ ಎಂದು ಕಾಂಗ್ರೆಸ್ ಹಾಗೂ ತಾರಾ ಗೌಡ ವಿರುದ್ಧ ಕಿಡಿಕಾರಿದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.