ಸುವಿಚಾರ

ವಿತರತಿ ಗುರುಃ ಪ್ರಾಜ್ಞೇ ವಿದ್ಯಾಂ ಯಥೈವ ತಥಾ ಜಡೇ
ನ ತು ಖಲು ತಯೋರ್ಜ್ಞಾನೇ ಶಕ್ತಿಂ ಕರೋತ್ಯಪಹಂತಿ ವಾ |
ಭವತಿ ಚ ಪುನರ್ಭೂಯಾನ್ಭೇದಃ ಫಲಂ ಪ್ರತಿ ತದ್ಯಥಾ
ಪ್ರಭವತಿ ಶುಚಿರ್ಬಿಂಬಗ್ರಾಹೇ ಮಣಿರ್ನ ಮೃದಾಂ ಚಯಃ |

ಗುರುಗಳು ಪಾಠಮಾಡುವಾಗ ತನ್ನ ಶಿಷ್ಯಂದಿರ ನಡುವೆ ಯಾವ ಭೇದವನ್ನೂ ಮಾಡುವುದಿಲ್ಲ. ಹೇಗೆ ಬುದ್ಧಿವಂತನಿಗೆ ಪಾಠಮಾಡುವರೋ ಹಾಗೇನೆ ಮಂದಬುದ್ಧಿಯ ಶಿಷ್ಯನಿಗೂ ವಿದ್ಯೆ ಹೇಳಿಕೊಡುತ್ತಾರೆ. ಒಬ್ಬನ ತಿಳಿವಿಗಾಗಿ ಹೆಚ್ಚಿಗೆ ಶ್ರಮವವನ್ನಾಗಲೀ, ಇನ್ನೊಬ್ಬನಿಗೆ ತಿಳಿಯಬಾರದೆಂದು ಕಡಿಮೆ ಶ್ರಮವನ್ನಾಗಲೀ ಹಾಕುವುದಿಲ್ಲ. ಹಾಗಿದ್ದೂ ನಾಳೆ ಆ ಶಿಷ್ಯಂದಿರಲ್ಲಿ ಯಾರು ಏನಾಗುವುರೆಂಬುದರಲ್ಲಿ ಮಾತ್ರ ಏಕರೂಪತೆಯಿಲ್ಲದೆ ಭೇದಗಳಿರುತ್ತವೆ. ಒಂದೇ ಮೃದ್ವಸ್ತುವಿನಿಂದ ನಿರ್ಮಿತವಾಗಿದ್ದರೂ ಮಣಿಯು ಪ್ರತಿಬಿಂಬವನ್ನು ಗ್ರಹಿಸುವಲ್ಲಿ ಸಮರ್ಥವಾಗುತ್ತದೆಯೇ ವಿನಾ ಮಣ್ಣಿನ ಮುದ್ದೆಯು ಸಮರ್ಥವಾಗದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.