ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿದ ರಾಜಾರುದ್ರಕೋಪ


ಯಲ್ಲಾಪುರ: ಪಟ್ಟಣದ ಬಿಲ್ಲಿಗದ್ದೆಯ ಬನಾನಾಕೌಂಟಿಯಲ್ಲಿ ಯಕ್ಷಶ್ರೀ ಕಲಾ ಸಂಸ್ಥೆ ಹಾಗೂ ಅತಿಥಿಕಲಾವಿದರಿಂದ ಪ್ರದರ್ಶನ ಗೊಂಡ ರಾಜಾರುದ್ರಕೋಪ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರವೀಂದ್ರ ಅಚವೆ,ಮದ್ದಲೆವಾದಕರಾಗಿ ಗಣಪತಿ ಕವಾಳೆ,ಚಂಡೆವಾದಕರಾಗಿ ಮಹಾಬಲೇಶ್ವರ ನಾಯಕನಕೆರೆ ಕಾರ್ಯನಿರ್ವಹಿಸಿದರು. ಕಥಾನಕದಲ್ಲಿ ರುದ್ರಕೋಪನಾಗಿ ಭಾಸ್ಕರ ಗಾಂವ್ಕಾರ ಬಿದ್ರೆಮನೆ, ಚಿತ್ರಾಕ್ಷಿಯಾಗಿ ಸುಬ್ರಹಣ್ಯ ಯಲಗುಪ್ಪ, ಅಜ್ಜಿಯಾಗಿ ಶ್ರೀಧರ ಹೆಗಡೆ ಕಾಸರಕೋಡು ಕಾರ್ಯನಿರ್ವಹಿಸಿದರು.

Categories: ಚಿತ್ರ ಸುದ್ದಿ

Leave A Reply

Your email address will not be published.