ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯಬೇಡಿ..ಶಿರಸಿ ಆಸ್ಪತ್ರೆ ಈಗ ಮಾದರಿ

ಶಿರಸಿ: ಇತಿಹಾಸದಲ್ಲೇ ಮೊದಲ ಬಾರಿಗೆ ಇಲ್ಲಿನ ಪಂಡಿತ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಯೊರ್ವರ ಕ್ಯಾನ್ಸರ ಗಡ್ಡೆಯನ್ನು ಆಪರೇಷನ್ ಮೂಲಕ ತೆಗೆಯುವಲ್ಲಿ ಸರ್ಕಾರಿ ವೈದ್ಯರು ಯಶಸ್ವಿಯಾಗಿದ್ದು, ಸರ್ಕಾರಿ ಆಸ್ಪತ್ರೆ ಎಂದು ಮೂಗು ಮುರಿಯುವವರಿಗೆ ಮಾದರಿಯಾಗಿದೆ.

ಶಿರಸಿಯ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ.ಗಜಾನನ ಭಟ್ ಹೊನ್ನಾವರಕ್ಕೆ 3ತಿಂಗಳ ಹಿಂದೆ ಹೋದಾಗ ಬಡವೃದ್ದರೊಬ್ಬರು ಜನನಾಂಗದ ನೋವಿನಿಂದ ಖಾಸಗಿ ಆಸ್ಪತ್ರೆಗೆ ಟೆಸ್ಟಗೆ ಬಂದಿದ್ದರು. ಜನನಾಂಗ ರೋಗದ ತಜ್ಞರಾದ ಡಾ.ಗಜಾನನ ಭಟ್ಟರು ತಕ್ಷಣ ಗಮನಿಸಿ ಕ್ಯಾನ್ಸರ ಸಂದೇಹ ವ್ಯಕ್ತಪಡಿಸಿದರು. ವೃದ್ದನಿಗೆ ಹುಬ್ಬಳ್ಳಿ ಅಥವಾ ಮಂಗಳೂರು ಸರ್ಕಾರಿ ಆಸ್ಪತ್ರೆಗೆ ಹೋಗಲು ಸೂಚಿಸಲಾಗಿತ್ತು.
ಆದರೆ ವೃದ್ದನು ಶಿರಸಿಯ ಡಾ.ಗಜಾನನ ಭಟ್ಟರನ್ನು ಸಂಪರ್ಕಿಸಿ ಬಹಳ ದೂರ ಹೋಗಲು ಆಗುವದಿಲ್ಲ. ನೀವೇ ಏನಾದರೂ ಮಾಡಲು ಮನವಿ ಮಾಡಿದ್ದಾನೆ. ಅವರು ಬಡವೃದ್ದನನ್ನು ಶಿರಸಿ ಆಸ್ಪತ್ರೆಗೆ ಕರೆತಂದು ಆಡ್ಮಿಟ ಮಾಡಿಕೊಂಡು ಶಿರಸಿಯ ಆಸ್ಪತ್ರೆಯ ಸರ್ಜನ ಡಾ.ರೇವಣಕರ, ಅರವಳಿಕೆ ತಜ್ಞೆ ಡಾ. ಪದ್ಮಿನಿ, ಇತರ ಸಿಬ್ಬಂದಿಗಳ ಸಹಕಾರದಲ್ಲಿ ಮಂಗಳವಾರ ಸುಮಾರು 75ನಿಮಿಷಗಳ ಯಶಸ್ವಿ ಆಪರೇಶನ ನಡೆಸಿದ್ದಾರೆ.

ತಾಲೂಕಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಮುಖ ಆಪರೇಶನ ನಡೆಯುವದೇ ಕಷ್ಟ. ಅದರಲ್ಲೂ ಕ್ಯಾನ್ಸರ ಆಪರೇಶನ ತುಂಬಾ ಅಪರೂಪವೇ ಆಗಿದ್ದು, ಅಂತಹದರಲ್ಲಿ ಇರುವ ಚಿಕ್ಕ ಆಪರೇಶನ ವ್ಯವಸ್ಥೆಯಲ್ಲಿ ಇಂತಹ ಮಹತ್ವದ ಆಪರೇಶನನ್ನು ಡಾ.ಗಜಾನನ ಭಟ್ಟ ಹಾಗೂ ತಂಡದವರು ಯಶಸ್ವಿಯಾಗಿ ಮಾಡಿರುವದು ಸರ್ಕಾರಿ ಆಸ್ಪತ್ರೆಯಲ್ಲೂ ಇಂತಹ ಆಪರೇಶನ ಮಾಡಲು ಸಾಧ್ಯವೆಂಬುದನ್ನು ತೋರಿಸಿಕೊಟ್ಟಂತಾಗಿದೆ. ಆಪರೇಶನಗೊಂಡ ವೃಧ್ದನು ಚೇತರಿಸಿಕೊಂಡಿದ್ದು, ವಾರ್ಡಗೆ ಸ್ಥಳಾಂತರಗೊಂಡಿದ್ದಾನೆ.

ಆಪರೇಷನ್ ಆದ ವ್ಯಕ್ತಿ ಕ್ಯಾನ್ಸರ್ ನಿಂದ ಗುಣಮುಖನಾಗಿದ್ದಾನೆ. ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ ಮಾಡಲಾಗುತ್ತದೆ. ಆಡ್ಮಿಟ್ ಆಗಿ ಮೂರು ದಿನಗಳಲ್ಲಿ ಆಪರೇಷನ್ ಮಾಡಲಾಗಿದೆ.
ಡಾ.ಗಜಾನನ ಭಟ್, ವೈದ್ಯ.

Categories: ಜಿಲ್ಲಾ ಸುದ್ದಿ

1 Comment

  1. ಶಿರಸಿ ಸಕಾ೯ರಿ ಆಸ್ಪತ್ರೆ ಭರವಸೆ ನೀಡುವ ಮೂಲಕ ಸಾಹಸ ಮಾಡಿದೆ.ಅಗತ್ಯ ಇದ್ದವರು ಬಳಸಿ ಸರ್ಕಾರವನ್ನು ನೆನೆಯುವಂತಾಗಲಿ

    Reply

Leave A Reply

Your email address will not be published.