ಸ್ವಚ್ಛತೆಯ ಹಬ್ಬ ಆಚರಣೆಗೆ ಲಯನ್ಸನಿಂದ ಜಾಗೃತಿ ಕರಪತ್ರ


ಶಿರಸಿ: ಸ್ವಚ್ಛತೆ ಹಾಗೂ ಶಬ್ದ ಮಾಲಿನ್ಯ ರಹಿತವಾಗಿ ದೀಪಾವಳಿ ಹಾಗೂ ಲಕ್ಷ್ಮೀ ಪೂಜೆಯನ್ನು ಆಚರಿಸುವಂತೆ ಇಲ್ಲಿನ ಲಯನ್ಸ ಕ್ಲಬ್ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅಂಗಡಿ ಮುಂಗಟ್ಟುಗಳಿಗೆ ಹಂಚುತ್ತಿದೆ.
ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛವಾಗಿಟ್ಟು ಸ್ವಚ್ಛವಾಗಿಟ್ಟುಕೊಳ್ಳಿ, ಬಳಸಿದ ಪ್ಲೇಟ್, ಲೋಟಗಳನ್ನು ರಸ್ತೆಯ ಮೇಲೆ ಕಸ ಹಾಕಬೇಡಿ, ಪಟಾಕಿ ರಸ್ತೆ ಮೇಲೆ ಸಿಡಿಸಬೇಡಿ, ಪೂಜೆಗೆ ಬಳಸಿದ ಬಾಳೆಕಂಬ, ಮಾವಿನ ತೋರಣ, ಹೂಗಳನ್ನು ಚೆಲ್ಲಬೇಡಿ, ಗೊಬ್ಬರವಾಗಿ ಬಳಸಿ ಅಥವಾ ನಗರಸಭೆ ಪೌರ ಕಾರ್ಮಿಕರಿಗೆ ನೀಡಿ, ಅಂಗಡಿಯ ಮುಂದೆ ಕಸದ ಬುಟ್ಟಿ ಎಲ್ಲರಿಗೂ ಕಾಣುವಂತೆ ಇಡಿ, ಪೂಜೆಗೆ ಬರುವವರಿಗೆ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡಿ ಎಂಬ ಮನವಿಯನ್ನು ಕರಪತ್ರದಲ್ಲಿ ಮುದ್ರಿಸಲಾಗಿದೆ.
ಸ್ವಚ್ಛತೆಯನ್ನು ಕಾಯ್ದುಕೊಳ್ಳುವದೇ ನಿಜವಾದ ಲಕ್ಷ್ಮೀಪೂಜೆ ಎಂಬ ಘೊಷಣೆ, ಸ್ವಚ್ಛ ಶಿರಸಿ ಸುಂದರ ಶಿರಸಿ ಎಂದು ಲಯನ್ಸ ಕ್ಲಬ್ ಕರಪತ್ರವನ್ನು ಪ್ರಕಟಿಸಿ ಅಂಗಡಿ ಮುಂಗಟ್ಟುಗಳಿಗೆ ವಿತರಿಸುತ್ತಿದೆ.
ಇದಕ್ಕೂ ಮುನ್ನ ಜಾಗೃತಿ ಕರ ಪತ್ರವನ್ನು ಲಯನ್ಸ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಗಡೆ, ಬಾಬುಲಾಲ ಚೌಧರಿ, ಗುರುರಾಜ ಹೊನ್ನಾವರ, ಪ್ರಭಾಕರ ಹೆಗಡೆ, ಲಿಯೋ ಅಧ್ಯಕ್ಷೆ ಸುಮೇದಾ ಹಿರೇಮಠ ಇತರರು ಬಿಡಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷೆ ಪ್ರತಿಭಾ ಹೆಗಡೆ, ಸಾವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಆಶಯದಲ್ಲಿ ಕರಪತ್ರ ಮುದ್ರಿಸಲಾಗಿದೆ ಎಂದು ತಿಳಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.