ಸುವಿಚಾರ

ಕಷ್ಟಾ ವೃತ್ತಿಃ ಪರಾಧೀನಾ ಕಷ್ಟೋ ವಾಸೋ ನಿರಾಶ್ರಯಃ

ನಿರ್ಧನೋ ವ್ಯವಸಾಯಶ್ಚ ಸರ್ವಕಷ್ಟಾ ದರಿದ್ರತಾ ||

ಇನ್ನೊಬ್ಬರ ಕೈಕೆಳಗಿದ್ದು, ಅವರಾಡಿದ್ದನ್ನು ಆಡಿಸಿಕೊಂಡು, ಅವರ ಅಣತಿಯನ್ನು ಮೀರದೆ ಕೆಲಸ ಮಾಡುವುದು ತುಂಬ ಕಷ್ಟಕರವಾದ್ದು. ಹಾಗೇನೆ ಮನೆಯಿಲ್ಲದೆ ಬದುಕುವ ಸ್ಥಿತಿ ಬಂದರೆ ಅದೂ ಸಹ ತುಂಬ ತ್ರಾಸದಾಯಕವಾದ್ದು. ಉದ್ಯೋಗವೊಂದನ್ನು ಮಾಡುತ್ತಿದ್ದಾಗಲೂ ಅದು ಲಾಭ ತಂದುಕೊಡುವಂಥದಲ್ಲವಾದರೆ ಅದೊಂದು ಬಗೆಯಲ್ಲಿ ಕಷ್ಟ. ಇದೆಲ್ಲಕ್ಕಿಂತಲೂ ಕಡುಕಷ್ಟಕರವಾದ್ದು ಮಾತ್ರ ಬಡತನವೆಂಬ ಶತ್ರು. ಅದು ಎಲ್ಲ ನೋವಿಗಿಂತ ಮಿಗಿಲಾದ ನೋವು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.