ಪ್ರೇಮ್ ಕುಮಾರ್ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಕೇಂದ್ರ ಸಚಿವ ಅನಂತಕುಮಾರ್‌ಗೆ ಮನವಿ


ಶಿರಸಿ: ನಿವೃತ್ತ ನೌಕರರು, ಇ ಖಾತಾ ಹೋರಾಟ ಸಮಿತಿಯವರು ಪ್ರೇಮ್ ಕುಮಾರ್ ಹತ್ಯೆ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂದು ವಿವಿಧ ಮನವಿಯನ್ನು ಕೇಂದ್ರ ಸಚಿವ ಅನಂತಕುಮಾರ ‌ಹೆಗಡೆ ಅವರಿಗೆ ಮಂಗಳವಾರ ನೀಡಿದರು.

ಖಾಸಗಿ ಮತ್ತು ಸಾರ್ವಜನಿಕ ಉದ್ಯಮಗಳ ನೌಕರರು ಮತ್ತು ನಿವೃತ್ತ ನೌಕರರ ಕನಿಷ್ಠ ಪಿಂಚಣಿಯನ್ನು ಮಾಸಿಕ 7500 ರೂಪಾಯಿ ನಿಗದಿಪಡಿಸುವ ಹಾಗೂ ತುಟ್ಟಿ ಭತ್ಯೆ ನೀಡುವಂತೆ ಒತ್ತಾಯಿಸಿ ಕಾರ್ಮಿಕ ಪಿಂಚಣಿ ಯೋಜನೆ ಪಿಂಚಣಿದಾರರ ಕ್ಷೇಮಾಭಿವದ್ಧಿ ಮಹಾಮಂಡಲದ ಉತ್ತರ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಮಂಗಳವಾರ ಅವರ ನಿವಾಸದಲ್ಲಿ ಮನವಿ ಸಲ್ಲಿಸಿದರು.

ಕಾರವಾರದ ಉದ್ಯಮಿ ಪ್ರೇಮಕುಮಾರ ನಾಯರ್ ಹತ್ಯೆ ತನಿಖೆ ವಿಳಂವಾಗುತ್ತಿದ್ದು, ತ್ವರಿತವಾಗಿ ಅಪರಾಧಿಗಳನ್ನು ಹಿಡಿದು ಶಿಕ್ಷಿಸುವಂತೆ ಕೋರಿ ಪ್ರೇಮಕುಮಾರ ನಾಯರ್ ಕುಟುಂಬಸ್ಥರು ಒತ್ತಾಯಿಸಿದರು. ಸಿಬಿಐ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ ಸೂಕ್ತ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಕೇಳಿಕೊಂಡರು. ಇದೇ ವೇಳೆ ಇ ಖಾತಾ ಹೋರಾಟ ಸಮಿತಿಯ ವರು ಸಮಸ್ಯೆ ಬಗೆಹರಿಸಲು ಹಾಗೂ ಸರಳೀಕರಣಗೊಳ್ಳಬೇಕು ಎಂದು ಸಚಿವರದಲ್ಲಿ ಮನವಿ ಮಾಡಿಕೊಂಡರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.